‘ಇದು ಸುಭೀಕ್ಷದ ಕಾಲ’; ರಂಜನಿ ಹೀಗಂದಿದ್ಯಾಕೆ?

07 June 2024

Pic credit - Instagram

Author: Rajesh Duggumane

ರಂಜನಿ ರಾಘವನ್ ಅವರು ಒಳ್ಳೆಯ ಕಾಲ ಬಂದಿದೆ ಎಂದು ಹೇಳಿದ್ದಾರೆ. ಇದಕ್ಕೆ ಅವರು ಕಾರಣ ಕೂಡ ನೀಡಿದ್ದಾರೆ.

ಒಳ್ಳೆಯ ಕಾಲ

ಈ ಮೊದಲು ಬದುಕಿದ್ದಕಿಂತಲೂ ಮನುಷ್ಯ ಅತ್ಯಂತ ಒಳ್ಳೆಯ ರೀತಿಯಲ್ಲಿ ಬದುಕುತ್ತಿದ್ದಾನೆ ಎಂದ ರಂಜನಿ ರಾಘವನ್.

ಒಳ್ಳೆಯ ರೀತಿ

ಸಾಮಾನ್ಯ ಜನರ ಜೀವನದಲ್ಲಿ ನಗು, ವಿಶ್ವಾಸ, ಜೀವನ ಪ್ರೀತಿ, ಆರೋಗ್ಯ, ಶಿಕ್ಷಣ ಇದಿಷ್ಟೂ ಇವತ್ತಿನ ಮಟ್ಟಕ್ಕೆ ಹೋಲಿಸಿದರೆ ಹಿಂದೆ ಯಾವ ಕಾಲದಲ್ಲೂ ಸಿದ್ಧಿಸಿರಲಿಕ್ಕಿಲ್ಲ ಎಂದ ರಂಜನಿ.

ಬದಲಾಗಿದೆ

‘ರಾಜನಿಗಾಗಿ ಯುದ್ಧಮಾಡಿ ಹುಳುಗಳಂತೆ ಸತ್ತವರೆಷ್ಟೋ, ಹೆಂಗಸರ ಪಾಡಂತೂ ವಿವರಿಸಬೇಕಿಲ್ಲ. ಈಗ ಅವೆಲ್ಲ ಇಲ್ಲ’ ಎಂದ ರಂಜನಿ.

ಸತ್ತಿದ್ದರು..

‘ಐವತ್ತು ವರ್ಷಗಳ ಹಿಂದೆ ತಿರುಗಿ ನೋಡಿದರೆ ಮನರಂಜನೆ ಅನ್ನೋದು ಶ್ರೀಮಂತರ ಸ್ವತ್ತಾಗಿತ್ತು. ಆ ಲಕ್ಷುರಿ ಇಂದು ಎಲ್ಲರಿಗೂ ಸಿಕ್ಕಿರುವುದು ಸಮಾನತೆಯ ಸಂಕೇತ’ ಎಂದ ರಂಜನಿ.

ಶ್ರೀಮಂತರ ಸ್ವತ್ತು

ಜಗತ್ತಿನ ಮುಂದೆ ಹಾಡಿ, ಕುಣಿಯುವ ಧೈರ್ಯ, ವಿಶ್ವಾಸ ಎಲ್ಲರಿಗೂ ಬಂದಿದೆ. ಎಲ್ಲರೂ ಹಾಡಿ-ನೃತ್ಯ ಮಾಡುತ್ತಾರೆ ಎಂದ ರಂಜನಿ.

ಹಾಡಿ-ಕುಣಿದರು..

‘ರಾಮಾಯಣದಲ್ಲಿ ರಾವಣನ ಆಳ್ವಿಕೆಯಲ್ಲಿದ್ದ ಲಂಕೆಯನ್ನ ಸುಭೀಕ್ಷವಾದ ರಾಜ್ಯ ಅಂತ ಹೇಳುತ್ತಾರೆ. ಆಗ ಎಲ್ಲರೂ ಹಾಡಿ-ಕುಣಿದು ಮಾಡುತ್ತಿದ್ದರು’ ಎಂದಿರೋ ರಂಜನಿ.

ರಾಮಾಯಣದಲ್ಲಿ

‘ನಮ್ಮ ಸಮಾಜವೂ ಸುಭೀಕ್ಷವಾಗಿದೆ. ಇದೂ ಸುಭೀಕ್ಷದ ಕಾಲವೇ ಅಲ್ಲವೇ ಎಂದು ಪ್ರಶ್ನೆ ಮಾಡಿದ ರಂಜನಿ ರಾಘವನ್.

ನಾವೂ ಸುಭೀಕ್ಷ

‘ವೃತ್ತಿಪರತೆ, ಕ್ವಾಲಿಟಿ ಬಯಸುವವರು ಹೇಗಿದ್ದರೂ ಆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತಾ ಇವತ್ತಿನ ಸ್ಥಿತಿಗೆ ನಾನು ಥ್ಯಾಂಕ್​ಫುಲ್’ ಎಂದ ನಟಿ.

ಧನ್ಯವಾದ

ಕ್ಯೂಟ್ ಆಗಿ ಕಾಣಿಸಿಕೊಂಡ ಪ್ರಿಯಾಂಕಾ ಉಪೇಂದ್ರ