ಎಲ್ಲೇ ಇದ್ದರು, ಹೇಗೆ ಇದ್ದರು ಇದೊಂದು ವಿಷಯ ಮರೆಯೊಲ್ಲ ರಶ್ಮಿಕಾ ಮಂದಣ್ಣ

20 Mar 2025

 Manjunatha

ರಶ್ಮಿಕಾ ಮಂದಣ್ಣ, ತೆಲುಗು ಚಿತ್ರರಂಗದ ಬಳಿಕ ಈಗ ಬಾಲಿವುಡ್​ನಲ್ಲಿಯೂ ಟಾಪ್ 1 ನಟಿಯಾಗಿ ಹೊರಹೊಮ್ಮುತ್ತಿದ್ದಾರೆ.

 ಬಾಲಿವುಡ್​ ಟಾಪ್ 1 ನಟಿ

ತೆಲುಗು ಚಿತ್ರರಂಗದಲ್ಲಿ ಒಂದರ ಹಿಂದೊಂದು ಹಿಟ್ ಕೊಟ್ಟ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್​ನಲ್ಲೂ ಸಹ ಅದೇ ಯಶಸ್ಸು ಮುಂದುವರೆಸಿದ್ದಾರೆ.

ಯಶಸ್ಸು ಮುಂದುವರೆದಿದೆ

ಸಲ್ಮಾನ್ ಖಾನ್ ಜೊತೆಗೆ ‘ಸಿಖಂಧರ್’ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ, ಕಾಲು ನೋವಿನ ನಡುವೆಯೂ ನಟಿಸಿ ವೃತ್ತಿಪರತೆ ಮೆರೆದಿದ್ದಾರೆ.

 ಸಲ್ಮಾನ್ ಜೊತೆ ‘ಸಿಖಂಧರ್

ಇತ್ತೀಚೆಗಷ್ಟೆ ಜಿಮ್ ಮಾಡುವಾಗ ಗಾಯ ಮಾಡಿಕೊಂಡಿದ್ದ ರಶ್ಮಿಕಾ, ಕಾಲಿನ ಮೂಳೆ ಮುರಿದುಕೊಂಡಿದ್ದರು. ವೀಲ್ ಚೇರ್ ಮೇಲಿಂದಲೇ ‘ಛಾವಾ’ ಪ್ರಚಾರ ಮಾಡಿದ್ದರು.

ಗಾಯ ಮಾಡಿಕೊಂಡಿದ್ದರು

ಈಗ ಕಾಲು ನೋವು ಗುಣವಾಗಿದ್ದು ಮತ್ತೆ ಜಿಮ್​ಗೆ ಹಾಜರಾಗಿದ್ದಾರೆ. ವರ್ಕೌಟ್ ಚಿತ್ರಗಳನ್ನು ಸಹ ನಟಿ ಹಂಚಿಕೊಂಡಿದ್ದಾರೆ.

 ಜಿಮ್​ಗೆ ಮರಳಿದ್ದಾರೆ ನಟಿ

ರಶ್ಮಿಕಾ ಹೇಳಿರುವಂತೆ, ಅವರು ಎಲ್ಲೇ ಇರಲಿ, ಹೇಗೆ ಇರಲಿ ಎಷ್ಟೇ ಬ್ಯುಸಿಯಾಗಿರಲಿ ಜಿಮ್ ಮಾಡಲು ಸಮಯ ಹೊಂದಿಸಿಕೊಳ್ಳುತ್ತಾರಂತೆ.

ವರ್ಕೌಟ್ ಮರೆಯೊಲ್ಲ ನಟಿ

ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗಿನ ನಾಲ್ಕು ಸಿನಿಮಾಗಳು, ತಮಿಳಿನ ಒಂದು ಸಿನಿಮಾ ಹಾಗೂ ಹಿಂದಿಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಹಿಂದಿಯ ಮೂರು ಸಿನಿಮಾ

ಮತ್ತೊಮ್ಮೆ ಕಿರಿಯ ನಟನೊಡನೆ ಲವ್ವಿ-ಡವ್ವಿ ಶುರು ಮಾಡಿದ ಮಲೈಕಾ