ಲೈಕ್ ಒತ್ತಿ ವಿವಾದ ಮೈಮೇಲೆಳೆದುಕೊಂಡ ರವೀನಾ ಟಂಡನ್ ಅಲಿಯಾಸ್ ‘ಕೆಜಿಎಫ್’​ನ ರಮಿಕಾ ಸೇನ್ .

10 DEC 2023

Author : Manjunatha

ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿದ್ದಾರೆ. ತಮ್ಮ ಚಿತ್ರಗಳನ್ನು ಹಂಚಿಕೊಳ್ಳುವ ಜೊತೆಗೆ ಇತರರ ಚಿತ್ರಗಳನ್ನು ಲೈಕ್ ಮಾಡುತ್ತಿರುತ್ತಾರೆ.

ಸಾಮಾಜಿಕ ಜಾಲತಾಣ

ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಲೈಕ್ ಮಾಡಿದ್ದಕ್ಕಾಗಿಯೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಪೋಸ್ಟ್ ಲೈಕ್ ಮಾಡಿ

ಇತ್ತೀಚೆಗೆ ಬಿಡುಗಡೆ ಆದ ‘ದಿ ಆರ್ಚೀಸ್’ ಸಿನಿಮಾದ ನಾಯಕ ಅಗಸ್ತ್ಯ ಹಾಗೂ ಖುಷಿ ಕಪೂರ್ ಬಗ್ಗೆ ಋಣಾತ್ಮಕವಾಗಿ ಬರೆಯಲಾಗಿದ್ದ ಪೋಸ್ಟ್​ ಒಂದನ್ನು ರವೀನಾ ಲೈಕ್ ಮಾಡಿದ್ದಾರೆ.

‘ದಿ ಆರ್ಚೀಸ್’ ನಟ-ನಟಿ

ಆ ಪೋಸ್ಟ್ ಬಾಲಿವುಡ್​ನಲ್ಲಿನ ನೆಪೊಟಿಸಮ್ ಬಗ್ಗೆ ಹಾಗೂ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಹಾಗೂ ಶ್ರೀದೇವಿ ಪುತ್ರಿ ಖುಷಿಗೆ ಪ್ರತಿಭೆ ಇಲ್ಲ ಎಂಬ ಅಂಶವನ್ನು ಒಳಗೊಂಡಿತ್ತು.

ಋಣಾತ್ಮಕ ಪೋಸ್ಟ್

ಆ ಪೋಸ್ಟ್ ಅನ್ನು ಲೈಕ್ ಮಾಡುವ ಮೂಲಕ ರವೀನಾ ಟಂಡನ್ ಪೋಸ್ಟ್​ನಲ್ಲಿ ಹೇಳಲಾಗಿರುವ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಅಭಿಪ್ರಾಯಕ್ಕೆ ಸಹಮತ

ಇದೀಗ ನಟಿ ರವೀನಾ ಟಂಡನ್ ಆ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಉದ್ದೇಶಪೂರ್ವಕವಾಗಿ ಆ ಪೋಸ್ಟ್​ಗೆ ಲೈಕ್ ಒತ್ತಿಲ್ಲ ಎಂದಿದ್ದಾರೆ.

ರವೀನಾ ಟಂಡನ್

ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೋಲ್ ಮಾಡುವಾಗ ಕೈ ತಪ್ಪಿ ಆ ಪೋಸ್ಟ್ ಲೈಕ್ ಆಗಿದೆಯೇ ವಿನಃ, ಆ ಪೋಸ್ಟ್​ ಯಾವುದೆಂದು ಸಹ ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ಕಣ್ತಪ್ಪಿ ಪೋಸ್ಟ್ ಲೈಕ್

ರವೀನಾ ಟಂಡನ್ ‘ಕೆಜಿಎಫ್ 2’ ಸಿನಿಮಾದಲ್ಲಿ ಪವರ್​ಫುಲ್ ಪಾತ್ರವಾಗಿರುವ ರಮೀಕಾ ಸೇನ್ ಪಾತ್ರದಲ್ಲಿ ನಟಿಸಿದ್ದಾರೆ.

ರಮೀಕಾ ಸೇನ್

‘ಅನಿಮಲ್’ ಸಿನಿಮಾದ ಕೆಲವೇ ದೃಶ್ಯಗಳಲ್ಲಿ ನಟಿಸಿ ಸ್ಟಾರ್ ಆಗಿರುವ ತೃಪ್ತಿ ದಿಮ್ರಿ ಭಾರಿ ದೊಡ್ಡ ಅವಕಾಶವನ್ನೇ ಬಾಚಿಕೊಂಡಿದ್ದಾರೆ.