ಕಾಡಿನಲ್ಲಿ ದೀಪಾವಳಿ ಆಚರಿಸಿದ ಸಮಂತಾ, ಇಲ್ಲಿವೆ ಕೆಲ ಚಿತ್ರಗಳು

01 OCT 2024

 Manjunatha

ವಿಚ್ಛೇದನದ ಬಳಿಕ ಸಮಂತಾ ಸಖತ್ ಭಿನ್ನ ಆಗಿದ್ದಾರೆ. ಅವರೀಗ ಟ್ರಾವೆಲರ್, ವಾಂಡರರ್, ಸಾಹಸಿ ಆಗಿದ್ದಾರೆ.

    ಸಮಂತಾ ಸಖತ್ ಭಿನ್ನ

ಪ್ರವಾಸ, ಟ್ರೆಕ್ಕಿಂಗ್, ಯೋಗ, ಜಿಮ್, ಆಧ್ಯಾತ್ಮಗಳಲ್ಲಿ ಪದೇ ಪದೇ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಸಮಂತಾ.

ಪ್ರವಾಸ, ಟ್ರೆಕ್ಕಿಂಗ್, ಯೋಗ

ಇದೀಗ ಸಮಂತಾ ದೀಪಾವಳಿ ಹಬ್ಬವನ್ನು ಸಖತ್ ಭಿನ್ನವಾಗಿ ಆಚರಣೆ ಮಾಡಿದ್ದಾರೆ. ಕಾಡಿನಲ್ಲಿ ದೀಪಾವಳಿ ಮಾಡಿದ್ದಾರೆ ಸಮಂತಾ.

ಸಮಂತಾ ದೀಪಾವಳಿ ಹಬ್ಬ

ಸಮಂತಾ ರಾಜಸ್ಥಾನ ಪ್ರವಾಸದಲ್ಲಿದ್ದು, ಕಾಡಿನ ಸಫಾರಿಗೆ ತೆರಳಿದ್ದಾರೆ. ಹಲವು ವನ್ಯಜೀವಿಗಳು ಅವರಿಗೆ ಎದುರಾಗಿವೆ.

   ರಾಜಸ್ಥಾನ ಪ್ರವಾಸದಲ್ಲಿ

ಅರಣ್ಯದಲ್ಲಿ ಜಿಂಕೆ, ಮೊಸಳೆ, ಹುಲಿಯನ್ನು ಸಹ ಸಮಂತಾ ನೋಡಿದ್ದಾರೆ. ಅವುಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

      ವನ್ಯ ಜೀವಿ ದರ್ಶನ

ದೊಡ್ಡ ಕೋಟೆಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಸಮಂತಾ ಅಲ್ಲಿಯೇ ದೇವರಿಗೆ ಪೂಜೆ ಮಾಡಿದ್ದಾರೆ, ಹಣತೆ ಹಚ್ಚಿದ್ದಾರೆ.

  ಕೋಟೆಯಲ್ಲಿ ದೀಪಾವಳಿ

ಸಮಂತಾ ತಮ್ಮ ಬಿಡುವಿನ ಸಮಯವನ್ನು ಪಾರ್ಟಿಗಳಲ್ಲಿ ವ್ಯರ್ಥ ಮಾಡುವ ಬದಲಿಗೆ ಹೀಗೆ ಪ್ರವಾಸಕ್ಕೆ ತೆರಳುತ್ತಿರುತ್ತಾರೆ.

    ಸಮಂತಾ ಪ್ರವಾಸಗಳು

ಐಶ್ವರ್ಯಾ ರೈ ಬಗೆಗಿನ ಈ ವಿಷಯಗಳು ನಿಮಗೆ ಗೊತ್ತೆ?