Pic credit - Instagram

Author: Rajesh Duggumane

10 July 2025

ಕನ್ನಡದಲ್ಲಿ ನಟಿಸಿದ ಈ ನಟಿ ನೆನಪಿದೆಯೇ?

ನೈರಾ ಬ್ಯಾನರ್ಜಿ

ನೈರಾ ಬ್ಯಾನರ್ಜಿ ಎಂಬುದು ಇವರ ಹೆಸರು. ಇವರು ಮೂಲತಃ ಮುಂಬೈನವರು. ಈಗ ಸಿನಿಮಾ ರಂಗದಲ್ಲಿ ಅಷ್ಟಾಗಿ ತೊಡಗಿಕೊಂಡಿಲ್ಲ. 

ಮಾಧುರಿಮಾ

ನೈರಾ ಅವರ ಮೂಲ ಹೆಸರು ಮಾಧುರಿ ಮಾ ಎಂದು. ಆ ಬಳಿಕ ಅವರು ತಮ್ಮ ಹೆಸರನ್ನು ನೈರಾ ಎಂದು ಬದಲಾಯಿಸಿಕೊಂಡರು. 

ಕನ್ನಡದಲ್ಲಿ

ನೈರಾ ಅವರು ಕನ್ನಡದಲ್ಲೂ ನಟಿಸಿದ್ದಾರೆ ಅನ್ನೋದು ವಿಶೇಷ. ಈ ವಿಚಾರ ಅನೇಕರಿಗೆ ತಿಳಿದಿಲ್ಲ. ಆ ಬಗ್ಗೆ ಇಲ್ಲಿದೆ ವಿವರ. 

ಸವಾರಿ 2

2014ರಲ್ಲಿ ಬಂದ ‘ಸವಾರಿ 2’ ನೈರಾ ನಟಿಸಿದ ಮೊದಲ ಕನ್ನಡ ಚಿತ್. ಆ ಬಳಿಕ ಕೆಲವು ಸಿನಿಮಾಗಳನ್ನು ಅವರು ಮಾಡಿದರು. 

ಇತರ ಸಿನಿಮಾ 

‘ಸುಪಾರಿ ಸೂರ್ಯ’ ಹಾಗೂ ‘ಟೈಗರ್’ ಹೆಸರಿನ ಕನ್ನಡ ಸಿನಿಮಾಗಳಲ್ಲಿ ನೈರಾ ಅವರು ನಟಿಸಿ ಗಮನ ಸೆಳೆದಿದ್ದಾರೆ. 

ಕೊನೆಯ ಚಿತ್ರ 

2017ರ ಬಳಿಕ ನೈರಾ ಅವರು ಯಾವುದೇ ಸಿನಿಮಾಗಳನ್ನು ಮಾಡಿಯೇ ಇಲ್ಲ. ಆ ಬಳಿಕ ಅವರು ಕಿರುತೆರೆಯಲ್ಲಿ ಬ್ಯುಸಿ ಆದರು. 

ಧಾರಾವಾಹಿ.. 

ಸದ್ಯ ನೈರಾ ಅವರು ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈ ಮೊದಲು ಅವರು ಹಿಂದಿ ಬಿಗ್ ಬಾಸ್​​ನಲ್ಲೂ ಕಾಣಿಸಿಕೊಂಡಿದ್ದರು. 

ಸೋಶಿಯಲ್ ಮೀಡಿಯಾ

ನೈರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆಗಗ ಅವರು ಪೋಸ್ಟ್​ಗಳನ್ನು ಹಾಕುತ್ತಾರೆ.