ಭಾರತೀಯ ಸಿನಿಮಾದ ದಂತಕತೆ ರಾಜ್ ಕಪೂರ್ ದಾಖಲೆಯನ್ನು ನಟ ಶಾರುಖ್ ಖಾನ್ ಸರಿಗಟ್ಟಿದ್ದಾರೆ. ಆ ದಾಖಲೆ ಏನು?

29 SEP 2023

ನಟ ಶಾರುಖ್ ಖಾನ್​ರ 'ಪಠಾಣ್' ಹಾಗೂ 'ಜವಾನ್' ಸಿನಿಮಾಗಳು ಇದೇ ವರ್ಷದಲ್ಲಿ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿವೆ.

'ಪಠಾಣ್' 'ಜವಾನ್'

'ಪಠಾಣ್' ಹಾಗೂ 'ಜವಾನ್' ಎರಡೂ ಸಿನಿಮಾಗಳು ಹಿಂದಿ ಚಿತ್ರರಂಗದ ಈವರೆಗಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಾಗಿ ಹೆಸರಾಗಿವೆ.

ಭಾರಿ ಕಲೆಕ್ಷನ್

ಒಂದೇ ವರ್ಷದಲ್ಲಿ ಎರಡು ಆಲ್​ ಟೈಮ್ ಹೈಯೆಸ್ಟ್ ಹಣ ಗಳಿಸಿದ ಹಿಟ್ ನೀಡಿದ ನಟ ಎನಿಸಿಕೊಂಡಿದ್ದಾರೆ ಶಾರುಖ್ ಖಾನ್ 

2 ಸೂಪರ್ ಹಿಟ್

ಒಂದೇ ವರ್ಷದಲ್ಲಿ ಎರಡು ಆಲ್​ ಟೈಮ್ ಹಿಟ್ ನೀಡಿದ ಶ್ರೇಯ ಈ ಹಿಂದೆ ನಟ ರಾಜ್ ಕಪೂರ್ ಹೆಸರಲ್ಲಿತ್ತು. ಅದನ್ನೀಗ ಶಾರುಖ್ ಖಾನ್ ಸರಿಗಟ್ಟಿದ್ದಾರೆ.

ರಾಜ್ ಕಪೂರ್

1949 ರಲ್ಲಿ ರಾಜ್ ಕಪೂರ್  ನಟನೆಯ 'ಅಂದಾಜ್' ಹಾಗೂ 'ಬರ್ಸಾತ್' ಸಿನಿಮಾಗಳು ಆಗಿನ ಕಾಲಕ್ಕೆ ಆಲ್​ ಟೈಮ್ ಹಿಟ್ ಆಗಿದ್ದವು.

'ಅಂದಾಜ್' 'ಬರ್ಸಾತ್'

'ಅಂದಾಜ್' ಹಾಗೂ 'ಬರ್ಸಾತ್' ಸಿನಿಮಾಗಳ ದಾಖಲೆಯನ್ನು ಬಹಳ ವರ್ಷಗಳ ಕಾಲ ಯಾರಿಗೂ ಮುರಿಯಲಾಗಿರಲಿಲ್ಲ.

ದಾಖಲೆ ಗಳಿಕೆ

ಶಾರುಖ್ ಖಾನ್​ರ ಪಠಾಣ್ ಸಿನಿಮಾ 513 ಕೋಟಿ ಗಳಿಸಿದ್ದರೆ (ಹಿಂದಿ ಆವೃತ್ತಿ) 'ಜವಾನ್' ಸಿನಿಮಾ 515 ಕೋಟಿ ಗಳಿಸಿ ಮುನ್ನುಗುತ್ತಿದೆ.

ಕಲೆಕ್ಷನ್ ಎಷ್ಟು?

ಇದೇ ವರ್ಷ ಶಾರುಖ್ ಖಾನ್​ರ 'ಡಂಕಿ' ಸಹ ಬಿಡುಗಡೆ ಆಗುತ್ತಿದ್ದು ಆ ಸಿನಿಮಾ ಮೂಲಕ ಮತ್ತೊಂದು ದಾಖಲೆಯನ್ನು ಶಾರುಖ್ ಬರೆಯುವ ಸಾಧ್ಯತೆ ಇದೆ.

ಮತ್ತೊಂದು ಹಿಟ್?

55 ಸೆಕೆಂಡ್ ಜಾಹೀರಾತಿನಲ್ಲಿ ನಟಿಸಲು ಇಷ್ಟೊಂದು ಸಂಭಾವನೆ ಕೇಳಿದರಾ ನಯನತಾರಾ?