ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ಶಾರುಖ್ ಪುತ್ರಿ ಸುಹಾನಾ ಖಾನ್, ಯಾವುದು ಆ ವೆಬ್ ಸರಣಿ?

07 Jan 2023

Author : Manjunatha

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗಷ್ಟೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅದೂ ಒಟಿಟಿ ಮೂಲಕವೇ.

ಶಾರುಖ್ ಪುತ್ರಿ ಸುಹಾನಾ

‘ದಿ ಆರ್ಚಿಸ್’ ಸಿನಿಮಾ ಮೂಲಕ ಸುಹಾನಾ ಖಾನ್ ನಟನೆಗೆ ಕಾಲಿರಿಸಿದ್ದಾರೆ. ಸುಹಾನಾರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

‘ದಿ ಆರ್ಚಿಸ್’ ಸಿನಿಮಾ

‘ದಿ ಆರ್ಚಿಸ್’ ಸಿನಿಮಾದ ಬಳಿಕ ಸುಹಾನಾ ಖಾನ್​ಗೆ ಹಲವು ಅವಕಾಶಗಳು ಸಹ ಬರುತ್ತಿವೆ. ಸಿನಿಮಾ ಜೊತೆಗೆ ವೆಬ್ ಸರಣಿ ಅವಕಾಶವೂ ಬಂದಿದೆ.

ಹಲವು ಅವಕಾಶಗಳು

ಸುಹಾನಾ ಖಾನ್ ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಸಿನಿಮಾದಲ್ಲಿ ತಂದೆ ಶಾರುಖ್ ಖಾನ್ ಜೊತೆಗೆ ನಟಿಸಲಿದ್ದಾರಂತೆ.

ನಿರ್ಮಾಣ ಸಂಸ್ಥೆ

ಇದರ ಜೊತೆಗೆ ಸುಹಾನಾ ಖಾನ್​ ಹೊಸ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ವೆಬ್ ಸರಣಿಯಲ್ಲಿ ನಟನೆ

ಸುಹಾನಾ ಖಾನ್​ರ ಸಹೋದರ ಆರ್ಯನ್ ಖಾನ್ ವೆಬ್ ಸರಣಿಯೊಂದರ ನಿರ್ದೇಶನ ಮಾಡುತ್ತಿದ್ದಾರೆ. ಆ ವೆಬ್ ಸರಣಿಯಲ್ಲಿ ಸುಹಾನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ವೆಬ್ ಸರಣಿಯಲ್ಲಿ ನಟನೆ

ಸುಹಾನಾ ಖಾನ್ ನ್ಯೂಯಾರ್ಕ್​ನಲ್ಲಿ ಸಿನಿಮಾ ಕುರಿತ ಕೋರ್ಸ್ ಒಂದನ್ನು ಮುಗಿಸಿಕೊಂಡಿದ್ದಾರೆ. ನಟಿಯಾಗಬೇಕೆಂಬ ಕನಸು ಮೊದಲಿನಿಂದಲೂ ಅವರಿಗಿತ್ತು.

ಸಿನಿಮಾ ಕುರಿತ ಕೋರ್ಸ್

‘ದಿ ಆರ್ಚಿಸ್’ ಸಿನಿಮಾದಲ್ಲಿ ನಟಿಸುವ ಮುನ್ನ ಸುಹಾನಾ, ಶಾರ್ಟ್ ಫಿಲಮ್​ ಒಂದರಲ್ಲಿ ನಟಿಸಿದ್ದು, ಆ ಕಿರು ಚಿತ್ರ ಯೂಟ್ಯೂಬ್​ನಲ್ಲಿದೆ.

‘ದಿ ಆರ್ಚಿಸ್’ ಸಿನಿಮಾ

ಮಹೇಶ್ ಬಾಬು-ರಾಜಮೌಳಿ ಸಿನಿಮಾದ ನಾಯಕಿ ಈ ವಿದೇಶಿ ಚೆಲುವೆಯ ಹಿನ್ನೆಲೆ ಏನು?