shruti-haasan5

ನಟಿ ಶ್ರುತಿ ಹಾಸನ್ ಮೊದಲ ಬಾರಿಗೆ ಬ್ರೇಕ್ ಅಪ್ ಬಗ್ಗೆ ಮಾತನಾಡಿದ್ದಾರೆ, ಈಗ ಶ್ರುತಿ ಸಿಂಗಲ್ಲಾ?

23 May 2024

TV9 Kannada Logo For Webstory First Slide

Author : Manjunatha

shruti-haasan1

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಕಳೆದ ಒಂದು ದಶಕ್ಕೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿದ್ದಾರೆ.

    ಕಮಲ್ ಪುತ್ರಿ ಶ್ರುತಿ

shruti-haasan2

ಅಪ್ಪನ ಹೆಸರು ಮೀರಿ ತನ್ನ ಸೌಂದರ್ಯ ಹಾಗೂ ಪ್ರತಿಭೆಯಿಂದ ಶ್ರುತಿ ಅವಕಾಶಗಳನ್ನು ಪಡೆಯುತ್ತಾ ಬಂದಿದ್ದಾರೆ.

ಪ್ರತಿಭೆಯಿಂದ ಅವಕಾಶ

shruti-haasan4

ಶ್ರುತಿ ಹಾಸನ್, ಸಿನಿಮಾಗಳಲ್ಲಿ ಮಾತ್ರವಲ್ಲದೆ ಖಾಸಗಿ ಬದುಕಿನಲ್ಲಿಯೂ ಬೋಲ್ಡ್. ತಮ್ಮ ಪ್ರೇಮದ ವಿಚಾರವನ್ನೂ ಸಹ ಮುಚ್ಚಿಟ್ಟವರಲ್ಲ.

ಬೋಲ್ಡ್ ವ್ಯಕ್ತಿತ್ವದ ಶ್ರುತಿ

ಶಂತನು ಹಜಾರಿಕಾ ಹೆಸರಿನ ಯುವಕನೊಡನೆ ಶ್ರುತಿ ಹಾಸನ್ ಸಹಜೀವನ ನಡೆಸುತ್ತಿದ್ದರು. ಇಬ್ಬರು ಒಟ್ಟಿಗಿರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು.

    ಶಂತನು ಹಜಾರಿಕಾ

ಶಂತನು ಹಜಾರಿಕಾ ಬಗ್ಗೆ ಶ್ರುತಿ ಹಾಸನ್ ಹಲವು ಬಾರಿ ಮಾತನಾಡಿದ್ದರು. ಇಬ್ಬರೂ ಪರಸ್ಪರ ಪ್ರೀತಿಯಿಂದರು. ಆದರೆ ಈಗ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.

ಶಂತನು ಜೊತೆ ಬ್ರೇಕಪ್

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಟ್ಟಿಗೆ ಮಾಡಿದ ಸಂವಾದದಲ್ಲಿ ಶ್ರುತಿ ಹಾಸನ್ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣ

ರಿಲೇಷನ್​ಶಿಪ್​ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರುತಿ ಹಾಸನ್, ಈ ವಿಷಯಗಳ ಬಗ್ಗೆ ನಾನು ಮಾತನಾಡುವುದಿಲ್ಲ ಆದರೆ ನಾನೀಗ ಸಿಂಗಲ್ ಎಂದಿದ್ದಾರೆ.

ಬ್ರೇಕಪ್ ಬಗ್ಗೆ ಶ್ರುತಿ

ನಾನೀಗ ಸಿಂಗಲ್ ಆಗಿದ್ದೇನೆ, ಆದರೆ ಮಿಂಗಲ್ ಆಗುವ ಯಾವುದೇ ಯೋಜನೆ ನನಗಿಲ್ಲ, ಸದ್ಯಕ್ಕೆ ನನ್ನ ಕೆಲಸದ ಮೇಲಷ್ಟೆ ಗಮನ ವಹಿಸಲಿದ್ದೇನೆ ಎಂದಿದ್ದಾರೆ.

ನಾನೀಗ ಸಿಂಗಲ್: ಶ್ರುತಿ

ಶ್ರುತಿ ಹಾಸನ್ ‘ಡಕಾಯಿಟ್’, ‘ಚೆನ್ನೈ ಸ್ಟೋರಿ’ ಹಾಗೂ ‘ಸಲಾರ್ 2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ಹಾಡುಗಳನ್ನು ಹೊರತರುವ ಯತ್ನದಲ್ಲಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ

ದಕ್ಷಿಣ ಭಾರತ ಚಿತ್ರರಂಗಕ್ಕೆ ಬರಲು ಸಜ್ಜಾದ ತೃಪ್ತಿ ದಿಮ್ರಿ, ಒಟ್ಟಿಗೆ ಎರಡು ಆಫರ್​ಗಳು