ತಮನ್ನಾ ಭಾಟಿಯಾ ಆಸ್ತಿ ಮೌಲ್ಯ ಎಷ್ಟು? ಹೊಂದಿರುವ ಐಶಾರಾಮಿ ಕಾರುಗಳು ಯಾವುವು?

19 OCT 2023

ತಮನ್ನಾ ಭಾಟಿಯಾ ಕಳೆದ 18 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಹಲವು ಭಾಷೆಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಬಹುಭಾಷಾ ನಟಿ

ತಮನ್ನಾ ಭಾಟಿಯಾ ಪ್ರತಿ ಸಿನಿಮಾಕ್ಕೆ ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆಯುತ್ತಾರಂತೆ. ಪ್ರತಿ ಐಟಂ ಹಾಡಿಗೆ ಒಂದು ಕೋಟಿ ಸಂಭಾವನೆ ಫಿಕ್ಸ್.

ಸಂಭಾವನೆ ಎಷ್ಟು?

ಮುಂಬೈನ ಜುಹುವಿನಲ್ಲಿ 17 ಕೋಟಿ ಮೌಲ್ಯದ ಐಶಾರಾಮಿ ಮನೆಯೊಂದನ್ನು ತಮನ್ನಾ ಭಾಟಿಯಾ ಹೊಂದಿದ್ದಾರೆ. 

ಐಶಾರಾಮಿ ಮನೆ

ಹೈದರಾಬಾದ್​ನಲ್ಲಿಯೂ ತಮನ್ನಾಗೆ ಮನೆ ಒಂದಿದೆ, ಜೊತೆಗೆ ಇನ್ನೂ ಕೆಲವು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಮೇಲೆ ಹೂಡಿಕೆಯನ್ನೂ ಮಾಡಿದ್ದಾರೆ.

ಹೈದರಾಬಾದ್​ನಲ್ಲಿ ಮನೆ

ತಮನ್ನಾ ಬಳಿ ಒಂದು ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರಿದೆ.

ಲ್ಯಾಂಡ್ ರೋವರ್ 

90 ಲಕ್ಷ ಮೌಲ್ಯದ ಬಿಎಂಡಬ್ಲು 320ಐ ಕಾರು ಸಹ ತಮನ್ನಾ ಬಳಿ ಇದೆ. 1 ಕೋಟಿ ಬೆಲೆಯ ಮರ್ಸೆಡೀಸ್ ಬೆಂಜ್ ಜಿಎಲ್​ಇ ಕಾರು ಸಹ ತಮನ್ನಾ ಭಾಟಿಯಾ ಓಡಿಸುತ್ತಾರೆ.

ಬಿಎಂಡಬ್ಲು 320ಐ

ಮಿತ್ಸುಬಿಷಿ ಪಜೆರೊ, ಇನ್ನೋವಾ ಕ್ರಿಸ್ಟಾ, ಹ್ಯುಂಡಾಯ್ ಕ್ರೆಟಾ ಇನ್ನೂ ಕೆಲವು ಕಾರುಗಳು ಸಹ ತಮನ್ನಾ ಬಳಿ ಇವೆ.

ಹಲವು ಕಾರು

'ವೈಟ್ ಆಂಡ್ ಗೋಲ್ಡ್' ಹೆಸರಿನ ಚಿನ್ನ ಹಾಗೂ ವಜ್ರದ ಆಭರಣ ಮಾರಾಟ ಮಳಿಗೆಯನ್ನು ಹೊಂದಿದ್ದಾರೆ. ಎರಡು ಕೋಟಿ ಬೆಲೆಯ ವಜ್ರದ ಉಂಗುರದ ಜೊತೆಗೆ ಹಲವು ದುಬಾರಿ ಆಭರಣಗಳನ್ನು ತಮನ್ನಾ ಹೊಂದಿದ್ದಾರೆ.

ಆಭರಣ ಮಳಿಗೆ

ಚಿನ್ನದ ಸೀರೆ ಉಟ್ಟು ಗಮನ ಸೆಳೆದ ನಟಿ ರಶ್ಮಿಕಾ ಮಂದಣ್ಣ