ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೇಲ ಆಸ್ತಿ ಮೌಲ್ಯ, ಪತಿಗಿಂತ ಕಡಿಮೆ ಏನಿಲ್ಲ

120 July 2024

 Manjunatha

ಭಾರತದ ಸ್ಟಾರ್ ನಟ ರಾಮ್ ಚರಣ್ ತೇಜ. ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಇವರೂ ಒಬ್ಬರು. ಆದರೆ ಇವರ ಪತ್ನಿಯೂ ಸಹ ಕಡಿಮೆಯೇನಲ್ಲ.

ರಾಮ್ ಚರಣ್ ತೇಜ ಪತ್ನಿ

ಉಪಾಸನಾ ಕೋನಿಡೇಲ ನಟಿ ಆಗದೇ ಇರಬಹುದು ಆದರೆ ಅತ್ಯುತ್ತಮ ಉದ್ಯಮಿ. ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಕುಟುಂಬ ಅವರದ್ದು.

ಕ್ರಾಂತಿ ಮಾಡಿದ ಕುಟುಂಬ

ಭಾರತದ ಬಹುತೇಕ ಪ್ರತಿ ನಗರದಲ್ಲೂ ಇರುವ ‘ಅಪೋಲೊ’ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್​ನ ಮಾಲೀಕತ್ವ ಉಪಾಸನಾ ಅವರ ಕುಟುಂಬದ್ದೆ.

     ‘ಅಪೋಲೊ’ ಆಸ್ಪತ್ರೆ

ಉಪಾಸನಾ ಕೋನಿಡೆಲ ಸಹ ಅಪೋಲೊ ಗ್ರೂಪ್​ನ ಮಂಡಳಿ ಸದಸ್ಯರಾಗಿದ್ದು ಅಪೋಲೊ ಕೆಲವು ಭಾಗಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಉಸ್ತುವಾರಿ ನೋಡಿಕೊಳ್ತಾರೆ

ಉದ್ಯಮಿಯಾಗಿರುವ ಉಪಾಸನಾ ಕೋನಿಡೆಲ ಅಪೋಲೊ ನೋಡಿಕೊಳ್ಳುವ ಜೊತೆಗೆ ಕೆಲವು ಉದ್ಯಮಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಪತಿ ರಾಮ್​ಗೂ ಸಹ ಹೂಡಿಕೆಯಲ್ಲಿ ಸಹಾಯ ಮಾಡುತ್ತಾರೆ.

ಹೂಡಿಕೆ ಸಹ ಮಾಡಿದ್ದಾರೆ

ಅಂದಹಾಗೆ ಉಪಾಸನಾ ಕೋನಿಡೆಲಾರ ಒಟ್ಟು ಆಸ್ತಿ ಮೌಲ್ಯ ಸುಮಾರು 1150 ಕೋಟಿ ರೂಪಾಯಿಗಳು. ರಾಮ್ ಚರಣ್​ ಆಸ್ತಿ ಮೌಲ್ಯ 1350 ಕೋಟಿ ರೂಪಾಯಿ.

ಉಪಾಸನಾ ಆಸ್ತಿ ಮೌಲ್ಯ?

ಇಂದು ಉಪಾಸನಾ ಕೋನಿಡೆಲಾ ಹುಟ್ಟುಹಬ್ಬ ಇಂದು, ಅವರ ವಯಸ್ಸೀಗ 36 ವರ್ಷ. ರಾಮ್ ಮತ್ತು ಉಪಾಸನಾಗೆ ಮುದ್ದಾದ ಹೆಣ್ಣು ಮಗುವಿದೆ. ಮಗುವಿನ ಹೆಸರು ಕ್ಲಿನ್ ಖಾರ.

ಉಪಾಸನಾ ಹುಟ್ಟುಹಬ್ಬ

ಅಪರೂಪಕ್ಕೆ ತುಸು ಕಡಿಮೆ ಬೆಲೆಯ ಉಡುಪು ಧರಿಸಿದ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ