'ಯೂ-ಟರ್ನ್' ಸುಂದರಿ ಶ್ರದ್ಧಾ ಶ್ರೀನಾಥ್ ಈಗೇನು ಮಾಡುತ್ತಿದ್ದಾರೆ? ಯಾವ ಸಿನಿಮಾಗಳಿವೆ ಕೈಯ್ಯಲ್ಲಿ?

02 NOV 2023

ಕನ್ನಡದ 'ಯೂ-ಟರ್ನ್' ಸಿನಿಮಾ ಮೂಲಕ ಬೆಳಕಿಗೆ ಬಂದ ನಟಿ ಶ್ರದ್ಧಾ ಶ್ರೀನಾಥ್. ಅಂದದ ಜೊತೆಗೆ ಅಭಿನಯವನ್ನೂ ಹೊಂದಿದ್ದ ಶ್ರದ್ಧಾ ಶ್ರೀನಾಥ್ ಆ ಬಳಿಕ ಹಲವು ಭಾಷೆಗಳಲ್ಲಿ ಸ್ಟಾರ್ ನಟರೊಟ್ಟಿಗೆ ನಟಿಸಿದರು.

ಯೂ-ಟರ್ನ್ ಚೆಲುವೆ

ಅಜಿತ್, ಮಾಧವನ್, ವಿಜಯ್ ಸೇತುಪತಿ, ನಾನಿ, ವಿಶಾಲ್, ನಿವೀನ್ ಪೌಲಿ, ವಿಕ್ಟರಿ ವೆಂಕಟೇಶ್ ಅಂಥಹಾ ಪರಭಾಷೆ ಸ್ಟಾರ್​ಗಳೊಟ್ಟಿಗೆ ಶ್ರದ್ಧಾ ನಟಿಸಿದ್ದಾರೆ.

ಸ್ಟಾರ್ ನಟರಿಗೆ ನಾಯಕಿ

'ಯೂ-ಟರ್ನ್', 'ಜೆರ್ಸಿ’, ‘ವಿಕ್ರಂ-ವೇದ’, ‘ನೇರ್ಕೊಂಡ ಪಾರ್ವೈ’, ‘ಮಾರ’, ‘ಚಕ್ರ’, ಇನ್ನೂ ಕೆಲವು ಸೂಪರ್ ಹಿಟ್ ಪರಭಾಷೆ ಸಿನಿಮಾಗಳಲ್ಲಿ ಶ್ರದ್ಧಾ ಶ್ರೀನಾಥ್.

ಪರಭಾಷೆ ಸಿನಿಮಾಗಳು

ಪರಭಾಷೆ ಸಿನಿಮಾಗಳ ಜೊತೆ-ಜೊತೆಗೆ ಕನ್ನಡದ ಸಿನಿಮಾಗಳಲ್ಲಿಯೂ ನಟಿಸುತ್ತಲೇ ಬಂದಿದ್ದಾರೆ ಶ್ರದ್ಧಾ. ಕನ್ನಡದಲ್ಲಿಯೂ ಕೆಲವು ಉತ್ತಮ ಸಿನಿಮಾಗಳ ಭಾಗವಾಗಿದ್ದಾರೆ ಶ್ರದ್ಧಾ.

ಕನ್ನಡ ಸಿನಿಮಾಗಳು

ಇದೀಗ ತೆಲುಗಿನಲ್ಲಿ 'ಸೈಂಧವ' ಹೆಸರಿನ ಸಿನಿಮಾದಲ್ಲಿ ಶ್ರದ್ಧಾ ನಟಿಸುತ್ತಿದ್ದು, ಸಿನಿಮಾದ ನಾಯಕ ವಿಕ್ಟರಿ ವೆಂಕಟೇಶ್.

ತೆಲುಗಿನ 'ಸೈಂಧವ'

ಕನ್ನಡದ ‘ರುದ್ರಪ್ರಯಾಗ’ ಸಿನಿಮಾಕ್ಕೂ ಶ್ರದ್ಧಾ ನಾಯಕಿಯಾಗಿ ಆಯ್ಕೆ ಆಗಿದ್ದರು, ಆದರೆ ಆ ಸಿನಿಮಾ ಇನ್ನೂ ಸೆಟ್ಟೇರಿಲ್ಲ.

ಸೆಟ್ಟೇರಿಲ್ಲ ರುದ್ರಪ್ರಯಾಗ

ತಮಿಳಿನ ‘ಕಲಿಯುಗಂ’ ಸಿನಿಮಾದಲ್ಲಿ ಶ್ರದ್ಧಾ ನಟಿಸಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿದಿದೆ. ಬಿಡುಗಡೆ ಆಗಲಿದೆ.

‘ಕಲಿಯುಗಂ’

ಹಿಂದಿಯ ‘ಲೆಟರ್ಸ್​ ಟು ಮಿಸ್ಟರ್ ಖಾನ್’ ಸಿನಿಮಾದಲ್ಲಿಯೂ ಶ್ರದ್ಧಾ ನಟಿಸಿದ್ದು ಅದೂ ಸಹ ಬಿಡುಗಡೆಗೆ ತಯಾರಾಗಿದೆ. ಇದು ಶ್ರದ್ಧಾರ ಮೊದಲ ಹಿಂದಿ ಸಿನಿಮಾ.

ಬಾಲಿವುಡ್ ಸಿನಿಮಾ

ಬಂಗಾರದ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ಮೇಘನಾ ಗಾಂವ್ಕರ್