ಕಣ್ಣಿನ ದೃಷ್ಟಿ ಹಾಗೂ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ

ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳಲ್ಲಿಯೇ ದೃಷ್ಟಿ ದೋಷದ ಸಮಸ್ಯೆಗಳು ಕಂಡು ಬರುತ್ತವೆ.

ಆದ್ದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಲು ಈ ಆಹಾರಗಳನ್ನು ಸೇವಿಸಿ.

ಮೀನು: ಇದು ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಡ್ರೈ ಫ್ರೂಟ್ಸ್​​​​ನಲ್ಲಿ ಒಮೆಗಾ 3ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ಕಣ್ಣಿಗೆ ತುಂಬಾ ಒಳ್ಳೆಯದು.

ಸಿಟ್ರಸ್​​ ಹಣ್ಣಿನಲ್ಲಿ ಉತ್ಕರ್ಷಣಾ ನಿರೋಧಕಗಳು ಸಮೃದ್ಧವಾಗಿದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಸೊಪ್ಪು ತರಕಾರಿಗಳಲ್ಲಿ ಕಣ್ಣಿನ ಆರೋಗ್ಯಕ್ಕೆ ಪೂರಕವಾದ ವಿಟಮಿನ್​​ ಸಿ ಸಮೃದ್ಧವಾಗಿದೆ.

ಕ್ಯಾರೆಟ್​​ನಲ್ಲಿರುವ ವಿಟಮಿನ್​​ ಎ, ಬೀಟಾ ಕ್ಯಾರೋಟಿನ್​​​ ಹೇರಳವಾಗಿದ್ದು, ಕಣ್ಣಿಗೆ ತುಂಬಾ ಒಳ್ಳೆಯದು.

ಸಿಹಿ ಗೆಣಸು ಉತ್ಕರ್ಷಣ ನಿರೋಧಕ, ವಿಟಮಿನ್​​ ಇ ಯ ಉತ್ತಮ ಮೂಲವಾಗಿದ್ದು, ಕಣ್ಣಿನ ಆರೋಗ್ಯ ಕಾಪಾಡುತ್ತದೆ.