ದೇಹದ ವಿವಿಧ ಅಂಗಾಂಗಗಳ ಆರೋಗ್ಯಕ್ಕಾಗಿ ಸರಿಯಾದ ಆಹಾರ ಕ್ರಮ ರೂಢಿಸಿಕೊಳ್ಳಿ
ನಿಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾಲ್ನಟ್ಸ್, ಸಾಲ್ಮನ್ ಮೀನು ಸೇವಿಸುವುದು ಉತ್ತಮ.
ಬಲವಾದ ಸ್ನಾಯುಗಳಿಗಾಗಿ ಬಾಳೆ ಹಣ್ಣು, ಕೆಂಪು ಮಾಂಸ, ಮೀನು ಮತ್ತು ಮೊಟ್ಟೆ ಸೇವಿಸುವುದು ಅಗತ್ಯವಾಗಿದೆ.
ಶ್ವಾಸಕೋಶದ ಆರೋಗ್ಯಕ್ಕಾಗಿ ಸೊಪ್ಪು ತರಕಾರಿಗಳು, ಬ್ರೊಕೊಲಿಗಳನ್ನು ಆಹಾರ ಕ್ರಮದಲ್ಲಿ ಜೋಡಿಸುವುದು ಉತ್ತಮ.
ಆರೋಗ್ಯಕರ ಚರ್ಮಕ್ಕಾಗಿ ಬೆರಿ ಹಣ್ಣುಗಳು, ಗ್ರೀನ್ ಟೀ, ಸಾಲ್ಮನ್ ಮೀನು ನಿಮ್ಮ ಆಹಾರ ಕ್ರಮದಲ್ಲಿ ಆಯ್ಕೆ ಮಾಡಿ.
ಕೂದಲಿನ ಆರೋಗ್ಯವನ್ನು ಕಾಪಾಡಲು ಸಾಕಷ್ಟು ಹಸಿರು ತರಕಾರಿಗಳು, ಬೀನ್ಸ್ ಹಾಗೂ ಮೀನು, ಮೊಟ್ಟೆ ಸೇವಿಸುವುದು ಅಗತ್ಯವಾಗಿದೆ.
ಕಣ್ಣಿನ ಆರೋಗ್ಯಕ್ಕಾಗಿ ಕ್ಯಾರೆಟ್, ಮೊಟ್ಟೆ, ಮತ್ತು ಜೋಳವನ್ನು ನಿಮ್ಮ ಆಹಾರ ಕ್ರಮದಲ್ಲಿ ಜೋಡಿಸಿಕೊಳ್ಳಿ.