ಬೇಸಿಗೆ ಕಾಲದಲ್ಲಿ ಸೇವಿಸಬೇಕಾದ 6 ಆರೋಗ್ಯಕರ ಆಹಾರಗಳು
ಕಲ್ಲಂಗಡಿ: ಈ ಬೇಸಿಗೆ ಹಣ್ಣಿನಲ್ಲಿ ಶೇ.91.45 ರಷ್ಟು ನೀರು ಇರುತ್ತದೆ. ಇದು ನಿಮ್ಮ ದೇಹದ ನೀರಿನ ಅಗತ್ಯತೆಯನ್ನು ಪೂರೈಸಲು ಸಹಾಯ ಮಾಡುತ್ತದೆ.
ಸೌತೆಕಾಯಿ: ನಾರಿನಂಶದಿಂದ ಕೂಡಿರುವ ಸೌತೆಕಾಯಿಯನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ಮಲಬದ್ಧತೆಯಿಂದ ದೂರವಿರಬಹುದು.
ಮೊಸರು: ಮೊಸರು ರುಚಿಕರ ಮಾತ್ರವಲ್ಲದೇ ದೇಹಕ್ಕೆ ಶೀತಕ ಪರಿಣಾಮವನ್ನು ನೀಡುತ್ತದೆ. ಮೊಸರಿನಿಂದ ಮಸಾಲೆಯುಕ್ತ ಮಜ್ಜಿಗೆ, ಅಥವಾ ಸಿಹಿ ಲಸ್ಸಿ ತಯಾರಿಸಿ ಸೇವಿಸಬಹುದು.
ಎಳನೀರು: ಎಳನೀರು ಕುಡಿಯುವುದರಿಂದ ಕ್ಯಾನ್ಸರ್ ನಿಂದ ದೂರವಿರಬಹುದು ಎಂದು ಅಧ್ಯಯನಗಳು ಹೇಳುತ್ತವೆ.
ಪುದೀನ: ಪುದೀನಾ ನಿಮ್ಮ ದೇಹದ ಉಷ್ಣತೆಯನ್ನು ತಂಪಾಗಿರಿಸುವುದರ ಜೊತೆಗೆ ನಿಮ್ಮ ಮೂಡ್ ಅನ್ನು ಫ್ರೆಶ್ ಮಾಡುತ್ತದೆ.
ಈರುಳ್ಳಿ: ನಿಮ್ಮ ದೈನಂದಿನ ಆಹಾರದಲ್ಲಿ ಈರುಳ್ಳಿಯನ್ನು ಸೇರಿಸುವುದರಿಂದ ಸೂರ್ಯನ ಶಾಖದಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಬಹುದು.