(Pic Credit: Govt)
11 September 2023
ಭಾರತ್ ಮಂಟಪಂನಲ್ಲಿ ಪ್ರದರ್ಶಿಸಲಾದ ಜಿ20 ದೇಶಗಳ ಸಾಂಸ್ಕೃತಿಕ ಕಲಾ ಕೃತಿಗಳ ಬಗ್ಗೆ ಪರಿಚಯ ಮುಂದಿನ ಸ್ಲೈಡ್ಗಳಲ್ಲಿ ನೋಡಿ.
ಡಿಜಿಟಲ್ ಮ್ಯೂಸಿಯಂ
(Pic Credit: Govt)
ಕ್ರಿಸ್ತಪೂರ್ವ 6ರಿಂದ 5ನೇ ಶತಮಾನದ ಹಿಂದೆ ಬದುಕಿದ್ದ ಪಾಣಿನಿ ಅವರು ಅಷ್ಟಾಧ್ಯಾಯಿ ಎಂಬ ಸಂಸ್ಕೃತ ವ್ಯಾಕರಣ ಗ್ರಂಥ ರಚಿಸಿದ್ದರು.
ಭಾರತದ ಅಷ್ಟಾಧ್ಯಾಯಿ
(Pic Credit: Govt)
ಇಂಡೋನೇಷ್ಯಾ ಸಾಂಸ್ಕೃತಿಕವಾಗಿ ಬಹಳ ಸಮೃದ್ಧವಾಗಿದೆ. ಅಲ್ಲಿನ ಬಾಟಿಕ್ ಶೈಲಿಯ ಬಟ್ಟೆಗಳ ಒಂದು ದೊಡ್ಡ ಪರಂಪರೆಯೇ ಇದೆ.
ಇಂಡೋನೇಷ್ಯಾದ ಸಾರಂಗ್
(Pic Credit: Govt)
ಬ್ರೆಜಿಲ್ ದೇಶದ ಪ್ರಜಾತಂತ್ರಕ್ಕೆ ಪ್ರತೀಕವಾಗಿ ಅಲ್ಲಿನ ರಾಷ್ಟ್ರೀಯ ಸಂಸತ್ತು ಅರಮನೆ ಇದೆ. ಅದ್ಬುತ ವಾಸ್ತುಶಿಲ್ಪ ಕಾಣಬಹುದು.
ಬ್ರೆಜಿಲ್ನ ಭವನ
(Pic Credit: Govt)
ಪ್ರಾಚೀನ ಕಾಲದಲ್ಲಿ ದಕ್ಷಿಣ ಅಮೆರಿಕದ ಬುಡಕಟ್ಟು ಜನರು ತಯಾರಿಸುತ್ತಿದ್ದ ವಿಶೇಷ ಉಣ್ಣೆ ರೀತಿಯ ಬಟ್ಟೆ ಇದಾಗಿದೆ.
ಅರ್ಜೆಂಟೀನಾದ ಪೋಂಚೋ
(Pic Credit: Govt)
ಆಸ್ಟ್ರೇಲಿಯಾದ ಮೂಲ ನಿವಾಸಿಗಳಾದ ಯೋಲ್ಣು (Yolŋu) ಜನಾಂಗದ ಸಾಂಸ್ಕೃತಿಕ ಸಮೃದ್ಧತೆಯನ್ನು ಬಿಂಬಿಸುವ ಯಿಣಪುಣಪು ಕಲೆ ಇದು.
ಆಸ್ಟ್ರೇಲಿಯಾದ YIŊAPUŊAPU
(Pic Credit: Govt)
ಕೆನಡಾ ಕಲಾವಿದ ಕ್ಯಾಲ್ವಿನ್ ಹಂಟ್ ರೂಪಿಸಿದ ಸೀ ಮಾನ್ಸ್ಟರ್ ಟ್ರಾನ್ಸ್ಫಾರ್ಮೇಶನ್ ಮಾಸ್ಕ್ ಇದು. ದಂತಕಥೆಯನ್ನಾಧರಿಸಿ ರಚಿಸಿದ ಕೃತಿ ಇದು.
ಕೆನಡಾದ ಸಮುದ್ರ ರಕ್ಕಸ
(Pic Credit: Govt)
ಚೀನಾದ ಸಿರಾಮಿಕ್ಸ್ ಕಸೂತಿ ಕಲೆ ವಿಶ್ವಖ್ಯಾತ. ಅದರಲ್ಲಿ ಫಹುವಾ ಎಂಬುದು ಒಂದು. ಯುವಾನ್ ವಂಶದ ಆಡಳಿತದ ವೇಳೆ ಈ ಕಲೆ ಆರಂಭವಾಯಿತು.
ಚೀನಾದ ಫಹುವಾ
(Pic Credit: Govt)
ಖ್ಯಾತ ವಿಜ್ಞಾನಿ ಮೇಡಂ ಮೇರಿ ಕ್ಯೂರಿ ಅವರ ಕಂಚಿನ ಪ್ರತಿಯೆಯನ್ನು ಯೂರೋಪಿಯನ್ ಯೂನಿಯನ್ ತನ್ನ ಸಾಂಸ್ಕೃತಿಕ ಪ್ರತೀಕವಾಗಿ ಮುಂದಿಟ್ಟಿದೆ.
ಮೇರೀ ಕ್ಯೂರಿ ಪ್ರತಿಮೆ
(Pic Credit: Govt)
ಪೂರ್ವ ಏಷ್ಯಾದ ಪೋರ್ಸಿಲೀನ್ ವಸ್ತುವಿನಿಂದ 1912ರಲ್ಲಿ ತಯಾರಾದ ಇದು ಆಕ್ಸೆರೆ ವಾಸ್ (ಹೂಕುಂಡ). ಇದರ ಕಸೂತಿ ಕಲೆ ವಿಶೇಷ.
ಫ್ರಾನ್ಸ್ನ ಹೂಕುಂಡ
(Pic Credit: Govt)
ವೋಲ್ಸ್ ವ್ಯಾಗನ್ ಕಂಪನಿಯ ಹಳೆಯ ಬೀಟಲ್ ಕಾರಿನ ಮಿನಿಯೇಚರ್ ರೆಪ್ಲಿಕಾ ಇದು. ಜರ್ಮನಿಯ ಎಂಜಿನಿಯರಿಂಗ್ ಸಾಧನೆಯ ಪ್ರತೀಕವಾಗಿದೆ.
ಜರ್ಮನಿಯ ಬೀಟಲ್
(Pic Credit: Govt)
ಇದು ರೋಮನ್ ಕಾಲದ ದೇವರಾದ ಅಪೋಲೋ ಬೆಲ್ವೆಡೆರೆಯ ಕಂಚಿನ ಪ್ರತಿಮೆ. ಇಟಲಿ ಕ್ರಾಂತಿ ನಡೆಯುವ ವೇಳೆ ಇದು ತಯಾರಾಗಿದ್ದು.
ಇಟಲಿಯ ಅಪೋಲೋ
(Pic Credit: Govt)
ಪುರಾತನವಾದ ಮತ್ತು ಜಪಾನ್ ಸಂಸ್ಕೃತಿಯ ಪ್ರತೀಕವಾದ ಕೋರಿನ್ ಕಿಮೋನೋ ಉಡುಗೆಯನ್ನು ಈ ಆಕೃತಿಗೆ ಅಳವಡಿಸಲಾಗಿದೆ.
ಜಪಾನ್ನ ಹಟ್ಸುನೆ ಮಿಕು
(Pic Credit: Govt)
ಸೌತ್ ಕೊರಿಯಾವನ್ನು ಟೊಪ್ಪಿಗಳ ನಾಡು ಎಂದು ಕರೆಯಲಾಗುತ್ತದೆ. ಗ್ಯಾಟ್ ಮತ್ತು ಜೊಕ್ದುರಿಯನ್ನು ಭಾರತ್ ಮಂಡಪಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು.
ಕೊರಿಯಾದ ಟೊಪ್ಪಿ
(Pic Credit: Govt)
ಮೆಕ್ಸಿಕೋ ಮೂಲನಿವಾಸಿಗಳೆನ್ನಲಾದ ಅಜ್ಟೆಕ್ ಜನಾಂಗದವರ ಪುರಾಣಕಥೆಗಳಲ್ಲಿ ಬರುವ ಸರ್ಪಗಳ ದೇವರು ಮತ್ತು ಭೂದೇವಿಯ ಕೃತಿ ಇದು.
ಮೆಕ್ಸಿಕೋದ ದೇವರು
(Pic Credit: Govt)
ರಷ್ಯಾದಲ್ಲಿ ಕಂಚಿನ ಯುಗದಲ್ಲಿದ್ದ ಖಾಕಸ್ ಸಂಸ್ಕೃತಿಯ ಪ್ರತೀಕ ಇದು. ಸಂತಾನ ದೇವತೆ ಯಮಾಯ್ಗೆ ಅರ್ಪಿತವಾಗಿ ಈ ಉಡುಗೆಗಳಿದ್ದವು.
ರಷ್ಯಾದ ತೊಡುಗೆ
(Pic Credit: Govt)
ಸೌದಿ ಅರೇಬಿಯಾದ ಪ್ರಾಚೀನ ಯುಗದ ಕುರುಹು ಇದು. ಕ್ರಿ.ಪೂ. 6ನೇ ಶತಮಾನದ ಹಿಂದಿನದ್ದೆನ್ನಲಾದ ಅರಮಾಯಿಕ್ ಶಾಸನ ಐತಿಹಾಸಿಕವಾಗಿ ಮಹತ್ವದ್ದು.
ಸೌದಿ ಅರಮಾಯಿಕ್
(Pic Credit: Govt)
25 ಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಮಹಿಳೆಯೊಬ್ಬಳ ತಲೆಬುರುಡೆ ಇದು. ಮಾನವನ ಇತಿಹಾಸದ ಒಂದು ಮಹತ್ವದ ಸಂಗತಿಯೂ ಹೌದು.
ದ. ಆಫ್ರಿಕಾದ ತಲೆಬುರುಡೆ
(Pic Credit: Govt)
ಟರ್ಕಿಯಲ್ಲಿ ಕೆಲವಾರು ಪ್ರಾಚೀನ ನಾಗರಿಕತೆಗಳು ಹುಟ್ಟಿವೆ. ಅದರಲ್ಲಿ ಮೆಸೊಪೊಟೇಮಿಯಾ ಒಂದು. ಆ ಕಾಲದ ವಾಸ್ತುಶಿಲ್ಪ ನೆನಪಿಸುವ ಗಾಜಿನ ಪ್ರತಿಮೆ.
ಟರ್ಕಿ ಗೋಬೆಕ್ಲಿ
(Pic Credit: Govt)
ಮ್ಯಾಗ್ನ ಕಾರ್ಟ ಎಂಬುದು ಬ್ರಿಟನ್ ದೇಶದ ಇತಿಹಾಸದ ಹೆಮ್ಮೆಯ ಗ್ರಂಥ. ರಾಜ ಮತ್ತು ಪ್ರಜೆಗಳ ಮಧ್ಯೆ ಸಂಬಂಧ ಹೇಗಿರಬೇಕು ಎಂದು ಇದು ತಿಳಿಸುತ್ತದೆ.
ಬ್ರಿಟನ್ ಮ್ಯಾಗ್ನ ಕಾರ್ಟಾ
(Pic Credit: Govt)
ಅಮೆರಿಕದ ಮೇರು ಕಲಾವಿದ ಸ್ಯಾನ್ಫಾರ್ಡ್ ಬಿಗ್ಗರ್ಸ್ ಅವರ ಪೇಂಟಿಂಗ್ ಕೃತಿ ಟಿರಾನಿ ಆಫ್ ಮಿರರ್ಸ್ ಇದು. ಈ ಕ್ಯೂಬ್ಗಳು ಚಲಿಸುತ್ತಿರುವಂತೆ ಕಾಣುತ್ತವೆ.
ಅಮೆರಿಕದ ಮಿರರ್ಸ್
(Pic Credit: Govt)