ಶುಂಠಿಗೆ ಪರ್ಯಾಯವಾಗಿ ಈ ಪದಾರ್ಥಗಳನ್ನು ಬಳಸಿ
ದಿನೇ ದಿನೇ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ.
ಇದೀಗಾ ಟೊಮ್ಯಾಟೋ ಸೇರಿದಂತೆ ಶುಂಠಿ, ಹಸಿಮೆಣಸು ದುಬಾರಿಯಾಗಿದೆ.
ಆದ್ದರಿಂದ ನಿಮ್ಮ ಅಡುಗೆ ಮನೆಯಲ್ಲಿ ಶುಂಠಿಗೆ ಪರ್ಯಾಯವಾಗಿ ಈ ಪದಾರ್ಥಗಳನ್ನು ಬಳಸಿ.
ಶುಂಠಿ ಖರೀದಿಸುವುದಕ್ಕಿಂತ ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಂಠಿ ಪೇಸ್ಟ್ ಖರೀದಿಸಿ.
ಒಣ ಶುಂಠಿ ಖರೀದಿಸಿ. ಶುಂಠಿಗೆ ಹೋಲಿಸಿದರೆ ಬೆಲೆ ಕಡಿಮೆ ಇರುತ್ತದೆ.
ದಾಲ್ಚಿನಿ ಶುಂಠಿಯಂತೆಯೇ ಆಹಾರಗಳಿಗೆ ಉತ್ತಮ ಪರಿಮಳವನ್ನು ನೀಡುತ್ತದೆ.
ಜಾಯಿಕಾಯಿಯನ್ನು ಪಾಕ ವಿಧಾನದಲ್ಲಿ ಸೇರಿಸಿಕೊಳ್ಳುವುದು ಶುಂಠಿಗೆ ಸೂಕ್ತ ಪರ್ಯಾಯ ಪದಾರ್ಥವಾಗಿದೆ.
ಶುಂಠಿಗೆ ಪರ್ಯಾಯವಾಗಿ ಅರಶಿನವನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ.