ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ

10 August 2023

ಪ್ರತಿದಿನ ಬೇರೆ ಬೇರೆ ಸಮಯಕ್ಕೆ ಮಲಗುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾವನ್ನುಂಟು ಮಾಡುತ್ತದೆ.

10 August 2023

ವಾರಾಂತ್ಯದಲ್ಲಿ ಹಾಗೂ ಕೆಲಸದ ದಿನಗಳಲ್ಲಿ ನಿದ್ದೆಯ ಸಮಯವನ್ನು ಬದಲಾಯಿಸುವುದು ಅಪಾಯಕಾರಿಯಾಗಿದೆ.

10 August 2023

ವಿಜ್ಞಾನಿಗಳ ಪ್ರಕಾರ ನಿದ್ದೆ ಹಾಗೂ ಆರೋಗ್ಯ ಪರಸ್ಪರ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ ಎಂದು ಹೇಳುತ್ತಾರೆ.

10 August 2023

ಸರಿಯಾದ ನಿದ್ದೆ ನಿಮ್ಮ ಹೃದಯದ ಆರೋಗ್ಯದಿಂದ ಹಿಡಿದು ಮೆದುಳಿನ ಆರೋಗ್ಯದ ವರೆಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.

10 August 2023

ನಿದ್ರಾಹೀನತೆಯು ರಕ್ತದೊತ್ತಡ, ಸಕ್ಕರೆಕಾಯಿಲೆ, ಬೊಜ್ಜು ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ.

10 August 2023

ಆದ್ದರಿಂದ ಪ್ರತಿದಿನ ನೀವು ಮಲಗುವ ಸಮಯವನ್ನು ನಿಗದಿಪಡಿಸಿಕೊಳ್ಳಿ ಎಂದು ತಜ್ಞರು ಎಚ್ಚರಿಸುತ್ತಾರೆ.

10 August 2023

ಆದರೆ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಯುವಕರಲ್ಲೇ ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ.

10 August 2023