(Google 25th Anniversary)
27 September 2023
1998ರ ಸೆ. 27ರಂದು ಶುರುವಾದ ಗೂಗಲ್ನಿಂದ ಅಸಂಖ್ಯಾತ ಉತ್ಪನ್ನಗಳು ಬಂದಿವೆ. ಅದರಲ್ಲಿ ಕೆಲವಿಷ್ಟು ವಿಫಲವಾಗಿವೆ. ಈ ಬಗ್ಗೆ ವಿವರ ಮುಂದೆ ಇದೆ...
(Google 25th Anniversary)
ನ್ಯೂಸ್ ಅಗ್ರಿಗೇಟರ್ ಆಗಿ 2005ರಲ್ಲಿ ಅರಂಭವಿಸಲಾದ ಗೂಗಲ್ ರೀಡರ್ ನಿರೀಕ್ಷಿಸಿದಷ್ಟು ಜನಪ್ರಿಯತೆ ಗಳಿಸಲಿಲ್ಲ. 2013ರಲ್ಲಿ ಇದು ಅಂತ್ಯಗೊಂಡಿತು.
(Google 25th Anniversary)
ಗೂಗಲ್ ಡಾಕ್ ರೀತಿಯಲ್ಲಿ ರಿಯಲ್ಟೈಮಲ್ಲಿ ಹಲವರು ಅಪ್ಡೇಟ್ ಮಾಡಬಹುದಾಗಿದ್ದ ಗೂಗಲ್ ವೇವ್ 2009ರಲ್ಲಿ ಆರಂಭವಾಗಿ 1 ವರ್ಷದಲ್ಲಿ ಮುಚ್ಚಿತು.
(Google 25th Anniversary)
2010ರಲ್ಲಿ ಶುರುವಾಗಿ ಒಂದು ವರ್ಷದಲ್ಲಿ ಮಗುಚಿತ್ತು ಗೂಗಲ್ ಬಜ್. ಫೇಸ್ಬುಕ್, ಟ್ವಿಟ್ಟರ್ಗೆ ಪೈಪೋಟಿ ನೀಡಲು ಇದನ್ನು ಆರಂಭಿಸಲಾಗಿತ್ತು.
(Google 25th Anniversary)
ನೆಕ್ಸಸ್ ಬ್ರ್ಯಾಂಡ್ನಲ್ಲಿ ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಸ್ಟ್ರೀಮಿಂಗ್ ಪ್ಲೇಯರ್ ಸಾಧನಗಳನ್ನು ತರಲಾಗಿತ್ತು. 2010ರಲ್ಲಿ ಆರಂಭವಾಗಿ 2016ರಲ್ಲಿ ನಿಲ್ಲಿಸಲಾಯಿತು.
(Google 25th Anniversary)
ಗೂಗಲ್ ಬಜ್ನಂತೆ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಆದ ಗೂಗಲ್ ಪ್ಲಸ್ ಅನ್ನು 2011ರಲ್ಲಿ ಶುರು ಮಾಡಲಾಯಿತು. 2019ರಲ್ಲಿ ಇದರ ಅಂತ್ಯವಾಯಿತು.
(Google 25th Anniversary)
2013ರಲ್ಲಿ ಭಾರೀ ನಿರೀಕ್ಷೆಯಲ್ಲಿ ಶುರುವಾಗಿದ್ದು ಗೂಗಲ್ ಗ್ಲಾಸ್. ಕಣ್ಮುಂದೆ ವರ್ಚುವಲ್ ರಿಯಾಲಿಟಿ ಕನಸು ಬಿಟ್ಟಿದ್ದ ಇದು ಎರಡೇ ವರ್ಷದಲ್ಲಿ ಮುಗಿದಿತ್ತು.
(Google 25th Anniversary)
ಮೆಸೇಜಿಂಗ್ ಆ್ಯಪ್ ಆದ ಇದನ್ನು 2016ರಲ್ಲಿ ಆರಂಭಿಸಿ 2018ರಲ್ಲಿ ನಿಲ್ಲಿಸಲಾಗಿತ್ತು. ಗೂಗಲ್ ಅಸಿಸ್ಟೆಂಟ್ ಇತ್ಯಾದಿ ಫೀಚರ್ಗಳನ್ನು ಇದು ಒಳಗೊಂಡಿತ್ತು.
(Google 25th Anniversary)
ಗೂಗಲ್ನ ವಿಫಲ ಉತ್ಪನ್ನಗಳು ಇನ್ನೂ ಹಲವಿವೆ. ಇನ್ಬಾಕ್ಸ್, ಹ್ಯಾಂಗೌಟ್ಸ್, ಪ್ಲೇಮ್ಯೂಸಿಕ್ ಇತ್ಯಾದಿ ಪ್ರಮುಖವಾದವು. ಆದರೂ ಗೂಗಲ್ ಮುನ್ನಡೆಗೆ ತಡೆ ಸಿಗಲಿಲ್ಲ.
(Google 25th Anniversary)