ಕಾಯಿ ಟೊಮೆಟೊಗಳು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಎಷ್ಟು ಪ್ರಯೋಜನಕಾರಿ? ತಜ್ಞರು ನೀಡಿದ ಉಪಯುಕ್ತ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಕಾಯಿ ಟೊಮೆಟೊಗಳನ್ನು ಚಟ್ನಿ, ಉಪ್ಪಿನಕಾಯಿ, ಗೊಜ್ಜು ಮುಂತಾದ ಆಹಾರಗಳಲ್ಲಿ ಬಳಸಲಾಗುತ್ತದೆ. 

ಕಾಯಿ ಟೊಮೆಟೊ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ ಎಂದು ಆಹಾರ ತಜ್ಞ ಗರಿಮಾ ಗೋಯಲ್ ಹೇಳಿದ್ದಾರೆ.

ಕಾಯಿ ಟೊಮೆಟೊಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಕಾಯಿ ಟೊಮೆಟೊ ನಿಮ್ಮ ಆಹಾರ ಕ್ರಮದಲ್ಲಿ ರೂಡಿಸಿಕೊಳ್ಳುವುದರಿಂದ ಚಳಿಗಾಲದಲ್ಲಿನ ಶೀತ, ಕೆಮ್ಮು, ನೆಗಡಿಯಂತಹ ಸೋಂಕುಗಳಿಂದ ನಿಮಗೆ ರಕ್ಷಣೆ ನೀಡುತ್ತದೆ. 

ಕಾಯಿ ಟೊಮೆಟೊ ನಿಮ್ಮ ಆಹಾರ ಕ್ರಮದಲ್ಲಿ ರೂಡಿಸಿಕೊಳ್ಳುವುದರಿಂದ ರೋಗಗಳು ಮತ್ತು ಆಕ್ಸಿಡೇಟಿವ್ ಹಾನಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

ನಿಮ್ಮ ದೇಹಕ್ಕೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ನೀಡುವ ಕಾಯಿ ಟೊಮೆಟೊವನ್ನು ನಿಮ್ಮ ಪ್ರತಿ ದಿನದ ಆಹಾರ ಕ್ರಮದಲ್ಲಿ ಜೋಡಿಸಿ.