ಗಿನ್ನೆಸ್ ವಿಶ್ವ ದಾಖಲೆ ಪಡೆದ 9 ವರ್ಷದ ಸಾಕು ಇಲಿ
ನಮ್ಮಲ್ಲಿ ಸಾಮಾನ್ಯವಾಗಿ ಅಯ್ಯೋ ಇಲಿಯ ಕಾಟ ತುಂಬಾ ಜಾಸ್ತಿ ಇದೆ ಅನ್ನುವವರೇ ಹೆಚ್ಚು.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ದೇಶಗಳಲ್ಲಿ ಇಲಿಗಳನ್ನು ಸಾಕು ಪ್ರಾಣಿಯಂತೆಯೇ ಸಾಕಲಾಗುತ್ತದೆ.
ಇಲ್ಲೊಂದು ಇಲಿಯನ್ನು ವ್ಯಕ್ತಿಯೊಬ್ಬ 9 ವರ್ಷಗಳಿಂದ ಸಾಕು ಪ್ರಾಣಿಯಂತೆಯೇ ಸಾಕುತ್ತಿದ್ದು, ಇದೀಗಾ ಈ ಇಲಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದೆ.
ಈ ಇಲಿಯನ್ನು ಇಂಗ್ಲೆಂಡಿನ ವ್ಯಕ್ತಿಯೊಬ್ಬರು ಸಾಕು ಪ್ರಾಣಿಯಂತೆ ಸಾಕಿ ಪ್ಯಾಟ್ರಿಕ್ ಸ್ಟೀವರ್ಟ್ ಎಂದು ಹೆಸರಿಟ್ಟಿದ್ದಾರೆ.
ಫೆಬ್ರವರಿ 9 ರಂದು ಈ ಇಲಿ ವಿಶ್ವದ ಅತ್ಯಂತ ಹಳೆಯ(9 ವರ್ಷ 210 ದಿನಗಳು) ಇಲಿ ಎಂದು ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡಿದೆ.
ಈ ಇಲಿಗಳು ಅಳಿವಿನಂಚಿನಲ್ಲಿರುವ ಪ್ರಬೇಧಗಳಾಗಿದ್ದು, ಹೆಚ್ಚಾಗಿ ಉತ್ತರ ಅಮೆರಿಕಾದ ಅತ್ಯಂತ ಚಿಕ್ಕ ಇಲಿಯ ಜಾತಿಗೆ ಸೇರಿದೆ.