ಭಾರತದ ರೆನಾನಿ ಜ್ಯುವೆಲ್ಸ್ ತಯಾರಿಸಿದ ಕೈಗಡಿಯಾರ ಇದು.

17,524 ವಜ್ರಗಳಿಂದ ತಯಾರಿಸಿದ, ಗಿನ್ನೆಸ್ ವಿಶ್ವ ದಾಖಲೆ ಬರೆದ ಭಾರತದ ವಾಚ್

ಸುಮಾರು 11 ತಿಂಗಳ  ಪ್ರಯತ್ನದ ನಂತರ ಈ ವಜ್ರದ ವಾಚ್​​​ ಸಿದ್ಧವಾಗಿದೆ.

ಈ ವಾಚ್​​​ ವಿನ್ಯಾಸದಲ್ಲಿ 17,512 ಬಿಳಿ ವಜ್ರಗಳನ್ನು ಮತ್ತು 12 ಕಪ್ಪು ವಜ್ರಗಳನ್ನು ಇರಿಸಲಾಗಿದೆ. 

ಈ ಹಿಂದೆ ಹಾಂಗ್ ಕಾಂಗ್​​ನ ಆರನ್ ಶಮ್ ಜ್ಯುವೆಲರಿ ಲಿಮಿಟೆಡ್ 15,858 ವಜ್ರಗಳಿಂದ ತಯಾರಾದ ಆಭರಣದಿಂದ ವಿಶ್ವ ದಾಖಲೆ ಪಡೆದುಕೊಂಡಿತ್ತು.

ಈ ವಾಚ್‌ಗೆ ಸ್ರಿಂಕಿಯಾ ಎಂದು ಹೆಸರಿಸಲಾಗಿದೆ. ಪುರಾಣಗಳ ಪ್ರಕಾರ ಸ್ರಿಂಕಿಯಾ ಎಂದರೆ ಹೂವು.

ವಾಚ್‌ನಲ್ಲಿ ಬಳಸಲಾದ ವಜ್ರಗಳನ್ನು ಇಂಟರ್ನ್ಯಾಷನಲ್ ಜೆಮಲಾಜಿಕಲ್ ಇನ್ಸ್ಟಿಟ್ಯೂಟ್ ಲ್ಯಾಬ್ (IGI) ಪ್ರಮಾಣಪತ್ರದಿಂದ ದೃಢೀಕರಿಸಲ್ಪಟ್ಟಿದೆ.