ಅತಿ ಉದ್ದದ ಕಿವಿಗಳ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಪಡೆದುಕೊಂಡ ಶ್ವಾನ

ಮಾರ್ಚ್ 25ರಂದು ಈ ಶ್ವಾನದ ಬಗ್ಗೆ @guinnessworldrecords ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ಶ್ವಾನವು ಬ್ಲಡ್‌ಹೌಂಡ್ ತಳಿಗೆ ಸೇರಿದ್ದು, ವಿಶ್ವದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಶ್ವಾನ ತಳಿಗಳಲ್ಲಿ ಒಂದಾಗಿದೆ.

ಈ ಶ್ವಾನದ  ಕಿವಿ ಬಲ ಮತ್ತು ಎಡಕ್ಕೆ 13.75 ಇಂಚು ಮತ್ತು 13.5 ಇಂಚು ಉದ್ದವಿದೆ.

ಅಮೇರಿಕಾದ ಇಲಿನಾಯ್ಸ್‌ ಸೇಂಟ್ ಜೋಸೆಫ್‌ನ ಬ್ರಿಯಾನ್ ಮತ್ತು ಕ್ರಿಸ್ಟಿನಾ ಫ್ಲೆಸ್ನರ್ ಅವರ ಮಾಲೀಕತ್ವದ ಶ್ವಾನ ಇದಾಗಿದೆ.

ಟೈಗರ್ ಹೆಸರಿನ ಈ ಶ್ವಾನವು 180 ಕ್ಕೂ ಹೆಚ್ಚು ಬೆಸ್ಟ್ ಆಫ್ ಬ್ರೀಡ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಈ ಬ್ಲಡ್‌ಹೌಂಡ್ ತಳಿಯ ಶ್ವಾನಗಳನ್ನು ಪೊಲೀಸ್ ಇಲಾಖೆಯಲ್ಲಿ ಶೋಧ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ.

ಈ ತಳಿಯ ಶ್ವಾನಗಳು ವಾಸನೆಯ ಮೂಲಕ ಒಂದು ವಾರಗಳ ಹಿಂದೆಯೇ ನಾಪತ್ತೆಯಾದ ವ್ಯಕ್ತಿಯನ್ನು ಕಂಡುಹಿಡಿಯುವ ಸಾಮರ್ಥ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿದೆ.