ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಎಚ್3ಎನ್2 ವೈರಸ್ ಸೋಂಕಿನ ಮುನ್ನೆಚ್ಚರಿಕಾ ಕ್ರಮಗಳು ಇಲ್ಲಿವೆ
ಇತ್ತೀಚಿನ ದಿನಗಳಲ್ಲಿ ಶೀತ, ಜ್ವರ, ಕೆಮ್ಮು ಸೋಂಕಿಗೆ ಎಚ್3ಎನ್2 ವೈರಸ್‌ನ ಉಪತಳಿ ಪ್ರಮುಖ ಕಾರಣ ಎಂದು ಐಸಿಎಂಆರ್ ತಿಳಿಸಿದೆ.
ಜ್ವರ, ಶೀತ, ಕಫ ಮತ್ತಿತರ ಲಕ್ಷಣ ಕಂಡು ಬಂದರೆ ಆ್ಯಂಟಿಬಯಾಟಿಕ್ ಗಳನ್ನು ತೆಗೆದುಕೊಳ್ಳುವುದನ್ನು ಆದಷ್ಟು ತಪ್ಪಿಸಿ.
ಪದೇ ಪದೇ ಆ್ಯಂಟಿ ಬಯೋಟಿಕ್ಸ್ ತೆಗೆದುಕೊಳ್ಳುವುದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗಬಹುದು.
ಹೆಚ್ಚಿನ ಜನಸಂದಣೆಯಿರುವ ಪ್ರದೇಶಗಳಲ್ಲಿ ಓಡಾಡುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಿ. ಸಾಮಾಜಿಕ ಅಂತರ ಕಾಪಾಡಿ.
ಜ್ವರ, ಶೀತ, ಕಫ, ದೀರ್ಘಾವಧಿ ಕೆಮ್ಮು ಕಂಡು ಬಂದರೆ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಳ್ಳಿ.
ಬಾಯಾರಿಕೆಯ ಹೊರತಾಗಿಯೂ ಆಗಾಗ ನೀರು ಕುಡಿಯುವ ಆಭ್ಯಾಸ ರೂಢಿಸಿಕೊಳ್ಳಿ.