ಕೂದಲಿನ ಆರೈಕೆಗೆ ಮೊಟ್ಟೆ ಬಳಸುವ ಸರಿಯಾದ ಕ್ರಮ ಇಲ್ಲಿದೆ

ಮೊಟ್ಟೆಯು ನಿಮ್ಮ ಕೂದಲಿನ ಬುಡದಿಂದಲೇ ಪೋಷಣೆ ನೀಡಿ ಹೊಳೆಯುವಂತೆ ಮಾಡುತ್ತದೆ. 

ಆದ್ದರಿಂದ ಕೂದಲಿನ ಆರೈಕೆಗೆ ಮೊಟ್ಟೆಯನ್ನು ಬಳಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹಿಸುಕಿದ ಬಾಳೆಹಣ್ಣಿನೊಂದಿಗೆ ಮೊಟ್ಟೆಯನ್ನು ಹಾಕಿ ಮಿಶ್ರಣ ಮಾಡಿ, ಕೂದಲಿಗೆ ಹಚ್ಚಿ. 

ಮೊಟ್ಟೆಯೊಂದಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕೂದಲಿಗೆ ಹಚ್ಚಿ. 

ಮೊಟ್ಟೆಯ ಹಳದಿ ಲೋಳೆಯೊಂದಿಗೆ ಸ್ವಲ್ಪ ತೆಂಗಿನ ಎಣ್ಣೆ ಹಾಗೂ ನಿಂಬೆ ರಸ ಹಾಕಿ ಕೂದಲಿಗೆ ಹಚ್ಚಿ. 

ಆಲಿವ್​ ಎಣ್ಣೆಯೊಂದಿಗೆ ಮೊಟ್ಟೆಯನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. 

ಇದಲ್ಲದೇ ಮೊಸರಿನೊಂದಿಗೆ ಮೊಟ್ಟೆಯನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಬಹುದು.