ವರ್ಕೌಟ್ ಸೆಷನ್‌ ಮೊದಲು ನೀವು ಈ ಆಹಾರ ಕ್ರಮ ರೂಢಿಸಿಕೊಳ್ಳಿ. ಜೊತೆಗೆ ನಿಮ್ಮ ದೇಹದಲ್ಲಾಗುವ ಬದಲಾವಣೆ ಕಂಡುಕೊಳ್ಳಿ.

ವರ್ಕೌಟ್ ಸೆಷನ್‌ ಮೊದಲು ಸೇವಿಸಬೇಕಾದ ಆಹಾರದ ಕುರಿತು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾರವರು ಮಾಹಿತಿ ನೀಡಿದ್ದಾರೆ.

ಬಾಳೆಹಣ್ಣಿನ ಸ್ಮೂಥಿ: ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದ್ದು, ವರ್ಕೌಟ್ ಸೆಷನ್‌  ಪೂರ್ಣಗೊಳಿಸಲು ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.

ಬ್ಲ್ಯಾಕ್ ಕಾಫಿ ಮತ್ತು ಬಾಳೆ ಹಣ್ಣು: ಇದು ನಿಮ್ಮ ದೇಹಕ್ಕೆ ಬೇಕಾಗುವ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ನ್ನು ನಿಮ್ಮ ದೇಹಕ್ಕೆ ಒದಗಿಸುತ್ತದೆ.

ವರ್ಕೌಟ್ ಸೆಷನ್‌ ಪ್ರಾರಂಭಿಸುವ ಮೊದಲು 1 ಗ್ಲಾಸ್ ಎಳನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಎಳನೀರು ವ್ಯಾಯಮದ ಸಮಯದಲ್ಲಿ ನಿಮಗೆ ಶಕ್ತಿಯನ್ನು ನೀಡಿ, ಹೆಚ್ಚು ಸುಸ್ತು ಆಗದಂತೆ ನೋಡಿಕೊಳ್ಳುತ್ತದೆ.

ಪೀನಟ್ ಬಟರ್ ನಲ್ಲಿ ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು,  ಇದು ನಿಮ್ಮ ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಾಯಕವಾಗಿದೆ.