ಇಂದಿನ ಬದಲಾದ ಜೀವನಶೈಲಿಯಿಂದಾಗಿ ಒತ್ತಡದ ಜೀವನ ಹಾಗೂ ಕಳಪೆ ಆಹಾರ ಕ್ರಮ ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಕ್ಯಾನ್ಸರ್‌ನಂತಹ ಕಾಯಿಲೆಯಿಂದ ರಕ್ಷಿಸಲು ಈ ಚಳಿಗಾಲದಲ್ಲಿ ಈ ಆಹಾರ ಕ್ರಮ ರೂಢಿಸಿಕೊಳ್ಳಿ.

ನಿಮ್ಮ ಆಹಾರ ಕ್ರಮದಲ್ಲಿ ಈರುಳ್ಳಿಯನ್ನು ರೂಢಿಸಿಕೊಳ್ಳುವುದ್ದರಿಂದ ಶ್ವಾಸಕೋಶದಿಂದ ಬರುವ ಕ್ಯಾನ್ಸರ್ ತಡೆಯವಲ್ಲಿ ಸಹಾಯಕವಾಗಿದೆ.

ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶ ಸ್ತನ, ಜಠರಗರುಳು, ಚರ್ಮದ ಕ್ಯಾನ್ಸರ್‌ಗೆ ಕಾರಣವಾದ ಕ್ಯಾನ್ಸರ್ ಕೋಶಗಳನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಟೊಮೆಟೊಗಳು ಕ್ಯಾನ್ಸರ್ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ.

ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಟೋಕೋಫೆರಾಲ್‌ಗಳು ನಿಮ್ಮ ದೇಹದಲ್ಲಿ ಗೆಡ್ಡೆಗಳು ಬೆಳೆಯದಂತೆ ಸಹಕರಿಸುತ್ತದೆ.

ಬೀನ್ಸ್ ಫೀನಾಲಿಕ್ ಆಮ್ಲಗಳು ಮತ್ತು ಆಂಥೋಸಯಾನಿನ್‌ಗಳಂತಹ ಕ್ಯಾನ್ಸರ್-ತಡೆಗಟ್ಟುವ ಅಂಶವನ್ನು ಹೊಂದಿರುತ್ತದೆ.