ಈ ಪದಾರ್ಥಗಳನ್ನು ಎಂದಿಗೂ ಫ್ರಿಡ್ಜ್ ನಲ್ಲಿ ಇಡಬೇಡಿ
ಸಾಮಾನ್ಯವಾಗಿ ತಂದ ಆಹಾರಗಳನ್ನು ಕೆಡದಿರಲು ಫ್ರಿಡ್ಜ್ ನಲ್ಲಿ ಇಡಲಾಗುತ್ತದೆ.
ಆದರೆ ಕೆಲವೊಂದು ಪದಾರ್ಥಗಳನ್ನು ಫ್ರಿಜ್ನಲ್ಲಿ ಇಟ್ಟು ಸೇವಿಸುವುದರಿಂದ ಆರೋಗ್ಯ ಕೆಡಲು ಕಾರಣವಾಗಬಹುದು.
ಬ್ರೆಡ್ ಗಳನ್ನು ಎರಡು ದಿನಕ್ಕಿಂತ ಹೆಚ್ಚಾಗಿ ಫ್ರಿಡ್ಜ್ ನಲ್ಲಿ ಇಡುವುದರಿಂದ ಬೂಸ್ಟ್ ಹಿಡಿಯಲು ಕಾರಣವಾಗುತ್ತದೆ.
ಕಲ್ಲಂಗಡಿ ಹಣ್ಣು ಶೇಕಡಾ 70ರಷ್ಟು ನೀರಿನಾಂಶದಿಂದಿರುವುದರಿಂದ ಅವುಗಳನ್ನು ಫ್ರಿಡ್ಜ್ ಬದಲಾಗಿ ಕೋಣೆಯ ಉಷ್ಣಾಂಶದಲ್ಲಿ ಶೇಖರಿಸಿಡಿ.
ಇರುಳ್ಳಿ-ಬೆಳ್ಳುಳ್ಳಿಗಳನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಈ ಪದಾರ್ಥಗಳನ್ನು ಬೇಗ ಕೆಡುತ್ತದೆ.
ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಡುವುದರಿಂದ ಅದು ಹರಳಿನಂತೆ ಅಥವಾ ದಪ್ಪವಾಗಿ ಮಾರ್ಪಾಡಾಗುತ್ತದೆ.
ಅಲೂಗಡ್ಡೆಯನ್ನು ಫ್ರಿಡ್ಜ್ ಬದಲಾಗಿ ಕೋಣೆಯ ಉಷ್ಣಾಂಶದಲ್ಲಿ ಶೇಖರಿಸಿಡಿ.