ಇಂದಿನ ಒತ್ತಡದ ಜೀವನಶೈಲಿಯಿಂದಾಗಿ ನೀವು ಮಾನಸಿಕವಾಗಿ ಕುಗ್ಗಿತ್ತಿದ್ದರೆ ಈ ಆಹಾರ ಕ್ರಮಗಳನ್ನು ರೂಡಿಸಿಕೊಳ್ಳಿ.

ನಿಮ್ಮ ಆರೋಗ್ಯವನ್ನು ಮಾನಸಿಕವಾಗಿ ಅಥವಾ ದೈಹಿಕವಾಗಿ ಕಾಪಾಡುವಲ್ಲಿ ಆಹಾರ ಕ್ರಮಗಳು ಪ್ರಮುಖ ಪಾತ್ರ ವಹಿಸುತ್ತದೆ.

ಡಾರ್ಕ್ ಚಾಕೋಲೇಟ್ ನಿಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಇದು ಒತ್ತಡ, ಆತಂಕ ನಿವಾರಿಸುತ್ತದೆ.

ಅರಶಿನವು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿದ್ದು, ಮೆದುಳಿನ ಕೋಶಗಳಿಗೆ ಉಂಟಾಗುವ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.

ಮೊಸರು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಜೋಡಿಸಿ. ಇದು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. 

ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ಇದರಲ್ಲಿನ ಅಮೈನೋ ಆಮ್ಲ ಮೆದುಳಿನ ಆರೋಗ್ಯ ಕಾಪಾಡಿ, ಆತಂಕವನ್ನು ತಡೆಯುವಲ್ಲಿ ಸಹಾಯಕವಾಗಿದೆ. 

ಮೊಟ್ಟೆ  ಟ್ರಿಪ್ಟೊಫಾನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಆತಂಕ, ಒತ್ತಡದಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ. 

ಬಾದಾಮಿಯು ನಿಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡಿ, ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.