ಹೃದಯದ ಆರೋಗ್ಯವನ್ನು ಕೆಡಿಸುವ ಅಧಿಕ ಕ್ಯಾಲೋರಿಯ ಆಹಾರಗಳು ಇಲ್ಲಿವೆ
ಸ್ವೀಟ್ ಚಿಲ್ಲಿ ಸಾಸ್: ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಆಹಾರಗಳಿಗೆ ಬಳಸುತ್ತೇವೆ. ಆದರೆ ಈ ಒಂದು ಚಮಚ ಸಾಸ್ನಲ್ಲಿ 15 ಗ್ರಾಂ ಕ್ಯಾಲೋರಿ ಇರುತ್ತದೆ.
ಕೆಚಪ್ ಇಲ್ಲದೇ ಫ್ರೆಂಚ್ ಫ್ರೈ ಮುಂತಾದ ಆಹಾರ ತಿನ್ನಲು ಸಾಧ್ಯವೇ ಇಲ್ಲ , ಆದರೆ ನೀವು ತಿನ್ನುವ ಪ್ರತೀ ಒಂದು ಚಮಚ ಕೆಚಪ್ 19 ಕ್ಯಾಲೋರಿ ಇರುತ್ತದೆ.
ಬಾರ್ಬೆಕ್ಯೂ ಸಾಸ್: ಎರಡು ಚಮಚದಲ್ಲಿ ಸುಮಾರು 100 ಕ್ಯಾಲೋರಿ ಇರುತ್ತದೆ. ಇದು ಹೃದಯದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಪ್ರತೀ ಚಮಚ ಸಲಾಡ್ ಕ್ರೀಮ್ನಲ್ಲಿ ಸುಮಾರು 50 ಕ್ಯಾಲೋರಿ ಇರುತ್ತದೆ. ಆದ್ದರಿಂದ ಸೇವನೆ ಮಿತಿಯಲ್ಲಿರಲಿ.
ಟಾರ್ಟರ್ ಸಾಸ್: ಕರಿದ ಮೀನು ಹಾಗೂ ಚಿಪ್ಸ್ಗಳಿಗೆ ಇದಂತೂ ಬೇಕೇ ಬೇಕು. ಆದರೆ ಇದರಲ್ಲಿ ಸುಮಾರು 60 ಕ್ಯಾಲೋರಿ ಇರುತ್ತದೆ.
ಆದರಿಂದ ನೀವು ಪ್ರತೀ ದಿನ ಸೇವಿಸುವ ಆಹಾರಗಳಲ್ಲಿ ಆದಷ್ಟು ಕಡಿಮೆ ಕ್ಯಾಲೋರಿಗಳನ್ನು ಆಯ್ಕೆ ಮಾಡಿ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಿ.