ಕಲ್ಲಂಗಡಿ ಬೀಜದಲ್ಲಿದೆ ಆರೋಗ್ಯದ ಗುಟ್ಟು

ಕಲ್ಲಂಗಡಿ ಬೀಜಗಳಲ್ಲಿ ಮ್ಯಾಂಗನೀಸ್, ತಾಮ್ರ, ಪೊಟ್ಯಾಸಿಯಂನಂತಹ ಖನಿಜ ಅಂಶ ಹೇರಳವಾಗಿದ್ದು ಮೂಳೆಗಳನ್ನು ಬಲಪಡಿಸುತ್ತದೆ.

ಕಲ್ಲಂಗಡಿ ಬೀಜ ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಲ್ಲಂಗಡಿ ಬೀಜ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳಿಂದ ಕೂಡಿದ್ದು, ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಕಲ್ಲಂಗಡಿ ಬೀಜದಲ್ಲಿರುವ ಮ್ಯಾಂಗನೀಸ್ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಲ್ಲಂಗಡಿ ಬೀಜ ಸೇವಿಸುವುದು ಉತ್ತಮ.

ನೀವು ಕಲ್ಲಂಗಡಿ ಬೀಜಗಳನ್ನು ಒಣಗಿಸಿ ಸೇವಿಸಬಹುದು. ಬಾಣಲಿಯಲ್ಲಿ ಹುರಿದು ಕೂಡಾ ತಿನ್ನಬಹುದು.