ಸಿಹಿ ಸೇವನೆಯ ಸರಿಯಾದ ಸಮಯ ಊಟದ ಮೊದಲು ಅಥವಾ ನಂತರ?
ಸಿಹಿ ತಿನಿಸುಗಳನ್ನು ಊಟದ ಮೊದಲು ತಿನ್ನಬೇಕೇ ಇಲ್ಲ ನಂತರವೇ? ತಜ್ಞರು ನೀಡಿರುವ ಸಲಹೆ ಇಲ್ಲಿದೆ.
ಸಾಕಷ್ಟು ಜನರು ಊಟದ ನಂತರ ಸಿಹಿಯನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ.
ಆದರೆ ಸಿಹಿ ತಿನ್ನುವ ಸರಿಯಾದ ಸಮಯದ ಬಗ್ಗೆ ಆರೋಗ್ಯ ತಜ್ಞರಾದ ಡಾ. ನಿತಿಕಾ ಕೊಹ್ಲಿ ಸಲಹೆ ನೀಡಿದ್ದಾರೆ.
ಊಟಕ್ಕೂ ಮುನ್ನ ಸಿಹಿಯನ್ನು ತಿನ್ನುವುದರಿಂದ ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ.
ಆಹಾರದ ಮಧ್ಯೆ ಅಥವಾ ಕೊನೆಯಲ್ಲಿ ಸಿಹಿಯನ್ನು ಸೇವಿಸುವುದರಿಂದ ಉದರ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು.
ಊಟಕ್ಕೂ ಮೊದಲು ಸಿಹಿ ತಿನ್ನುವ ಅಭ್ಯಾಸವನ್ನು ರೂಢಿಸಿ ಎಂದು ಡಾ. ನಿತಿಕಾ ಕೊಹ್ಲಿ ಹೇಳುತ್ತಾರೆ.