ಟೊಮೊಟೋ ಸೇವನೆಯಿಂದಾಗುವ ಲಾಭಗಳು ಇಲ್ಲಿವೆ

ಟೊಮೊಟೋದಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. 

ಇದರಲ್ಲಿ ಲೈಕೋಪೀನ್​​ನಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. 

ಫೈಬರ್​​ನ ಅಂಶ ಹೇರಳವಾಗಿದ್ದು, ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.

ಟೊಮೊಟೋ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ತೂಕ ನಷ್ಟಕ್ಕೆ ಸಹಾಯಕವಾಗಿದೆ. 

ಟೊಮೊಟೋ ಸೇವನೆ ದೇಹದಲ್ಲಿ ಕ್ಯಾನ್ಸರ್​​​ ಅಭಿವೃದ್ಧಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಟೊಮೊಟೋದಲ್ಲಿರುವ ಪೊಟ್ಯಾಸಿಯಮ್​​​ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಟೊಮೊಟೋದಲ್ಲಿ ವಿಟಮಿನ್​​ ಎ ಹಾಗೂ ಸಿ ಸಮೃದ್ದವಾಗಿದ್ದು, ತ್ವಚೆಗೆ ಕಾಂತಿ ನೀಡುತ್ತದೆ.

ಗರ್ಭಾವಸ್ಥೆಯಲ್ಲಿ ಭ್ರೂಣದ ಬೆಳವಣೆಗೆಯ ಜೊತೆಗೆ ತಾಯಿಯ ಆರೋಗ್ಯಕ್ಕೂ ಒಳ್ಳೆಯದು.