19 September 2024
Pic credit - iStock
Author: Sushma Chakre
ತೂಕ ಇಳಿಸಿಕೊಳ್ಳಲು ಮತ್ತು ತ್ವಚೆಯ ಆರೈಕೆಗೆ ಸೌತೆಕಾಯಿ ಅತ್ಯುತ್ತಮ ಆಯ್ಕೆ. ಇದು ಅನೇಕ ಉಪಯುಕ್ತ ಪೋಷಕಾಂಶಗಳನ್ನು ಒಳಗೊಂಡಿದೆ. ಅನೇಕ ಜನರು ಸೌತೆಕಾಯಿಯನ್ನು ಸಲಾಡ್ ಆಗಿ ತಿನ್ನಲು ಬಯಸುತ್ತಾರೆ.
Pic credit - iStock
ಸೌತೆಕಾಯಿ ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ಗಳಲ್ಲಿ ಸಮೃದ್ಧವಾಗಿದೆ. ಸೌತೆಕಾಯಿ ಉತ್ತಮ ಪೋಷಣೆಯ ಮೂಲವಾಗಿದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
Pic credit - iStock
ಸೌತೆಕಾಯಿಯ ಸಿಪ್ಪೆಯನ್ನು ಬಿಸಾಡುವ ಮುನ್ನ ಅದರ ಸಿಪ್ಪೆಯಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.
Pic credit - iStock
ಬೇಸಿಗೆಯಲ್ಲಿ ಮೊಡವೆ ಸಮಸ್ಯೆ ಹೆಚ್ಚು ಕಾಡುತ್ತದೆ. ಎಣ್ಣೆ ತ್ವಚೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಕ್ಯಾರೆಟ್ ಸಿಪ್ಪೆ ಮೊಡವೆಗಳ ವಿರುದ್ಧ ಹೋರಾಡುತ್ತದೆ. ಇದರ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಒಳಗಿನಿಂದ ಪುನರುಜ್ಜೀವನಗೊಳಿಸುತ್ತವೆ.
Pic credit - iStock
ಚರ್ಮದ ತೇವಾಂಶವನ್ನು ಹೆಚ್ಚಿಸುವಲ್ಲಿ ಕ್ಯಾರೆಟ್ ಸಿಪ್ಪೆ ಪ್ರಮುಖ ಪಾತ್ರ ವಹಿಸುತ್ತದೆ. ಸೌತೆಕಾಯಿಯ ಸಿಪ್ಪೆಯನ್ನು ಮಿಕ್ಸಿಯಲ್ಲಿ ಅರೆದು ಚರ್ಮಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಯು ಹೊಳೆಯುತ್ತದೆ.
Pic credit - iStock
ಬೇಸಿಗೆಯಲ್ಲಿ ಅತಿಥಿಗಳು ಮನೆಗೆ ಬಂದಾಗ ತಂಪು ಪಾನೀಯಗಳನ್ನು ತಯಾರಿಸುತ್ತೇವೆ. ಆ ಪಾನೀಯವನ್ನು ಕುಡಿದರೆ ಪರಿಹಾರ ಸಿಗುತ್ತದೆ. ಬಿಸಿ ವಾತಾವರಣದಲ್ಲಿ ತಂಪು ಪಾನೀಯಗಳನ್ನು ನೀಡುವಾಗ ಅದಕ್ಕೆ ಸೌತೆಕಾಯಿಯ ಸಿಪ್ಪೆ ಬಳಸಿ ಸುಂದರವಾಗಿ ಅಲಂಕರಿಸಬಹುದು.
Pic credit - iStock
ಹಿತ್ತಲಿನಲ್ಲಿ ಬೆಳೆಯುವ ಸಸ್ಯಗಳಿಗೆ ಹಸಿಗೊಬ್ಬರವಾಗಿ ತರಕಾರಿ ಸಿಪ್ಪೆಗಳು ಉಪಯುಕ್ತವಾಗಿವೆ. ಸೌತೆಕಾಯಿ ಸಿಪ್ಪೆಯು ಹೆಚ್ಚಿನ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇವುಗಳನ್ನು ಗೊಬ್ಬರವಾಗಿ ಗಿಡಗಳಿಗೆ ಹಾಕಿದರೆ ಪೋಷಕಾಂಶಗಳು ಬೇರುಗಳನ್ನು ತಲುಪಿ ಅವು ಬೆಳೆಯುತ್ತವೆ.
Pic credit - iStock
ಸೌತೆಕಾಯಿ ಸಿಪ್ಪೆ ಮಣ್ಣಿನಲ್ಲಿ ವೇಗವಾಗಿ ಕೊಳೆಯುತ್ತದೆ. ಫಲವತ್ತಾದ ಗೊಬ್ಬರವಾಗುತ್ತದೆ ಮತ್ತು ಸಸ್ಯಗಳಿಗೆ ಪ್ರಯೋಜನವನ್ನು ನೀಡುತ್ತದೆ.
Pic credit - iStock