22-12-2023

ಕೊರೊನಾಗೆ ಬೆಂಗಳೂರೇ ಹಾಟ್​ಸ್ಪಾಟ್​: ಒಟ್ಟು ಪ್ರಕರಣಗಳಲ್ಲಿ ಶೇ 90 ನಗರದಲ್ಲೇ ಪತ್ತೆ

Author: ಗಣಪತಿ ಶರ್ಮ

ರಾಜ್ಯದಲ್ಲಿ ಮತ್ತೆ ಕೊರೊನಾತಂಕ ಸೃಷ್ಟಿಯಾಗಿದೆ. ರಾಜಧಾನಿ ಬೆಂಗಳೂರಿನಲ್ಲೇ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿದೆ.

ರಾಜ್ಯದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆ. ಬೆಂಗಳೂರಿನಲ್ಲೇ 93 ಕೇಸ್‌ಗಳು ಪತ್ತೆ.

ಕೊರೊನಾಗೆ ಬಲಿಯಾದ ಮೂವರು ಸಹ ಬೆಂಗಳೂರಿಗರೇ ಆಗಿದ್ದಾರೆ.

ಪ್ರತಿ ನಿತ್ಯದ ಕೇಸ್‌ಗಳಲ್ಲಿ ಬೆಂಗಳೂರಿನಲ್ಲೇ ಹೆಚ್ಚು ಕೇಸ್‌ಗಳು ಪತ್ತೆ. ಮತ್ತೆ 45 ಜನರ ಸ್ಯಾಂಪಲ್ ಪಡೆದ ಆರೋಗ್ಯ ಇಲಾಖೆ.

ಈವರೆಗೆ 50 ಜನರ ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸ್‌ಗೆ ರವಾನೆ, ವರದಿಗಾಗಿ ಕಾಯುತ್ತಿರುವ ಆರೋಗ್ಯ ಇಲಾಖೆ.

ಜಿನೋಮಿಕ್ ಸೀಕ್ವೆನ್ಸ್ ರಿಪೋರ್ಟ್ ಏನಾಗಲಿದೆ ಎಂಬುದು ದೊಡ್ಡ ತಲೆನೋವಾಗಿದೆ. ಇದು JN.1 ಉಪತಳಿಯಾ ಎಂಬ ಆತಂಕ ಹೆಚ್ಚಾಗಿದೆ.

ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಧೈರ್ಯ ಹೇಳಿದ್ದಾರೆ.

ಆತಂಕ ಬೇಡ, ಮುನ್ನೆಚ್ಚರಿಕೆ ಅಗತ್ಯ. ಕೊರೊನಾ ಬಗ್ಗೆ ನಿರ್ಲಕ್ಷ್ಯವಹಿಸಬೇಡಿ ಎಂದಿದ್ದಾರೆ ತಜ್ಞರು.