28 February 2025

Pic credit -  Pintrest

Preethi Bhat

 ಗರ್ಭಿಣಿಯರು ಎಳನೀರನ್ನು ಕುಡಿಯಬಹುದೇ? ಇಲ್ಲಿದೆ ತಜ್ಞರ ಉತ್ತರ

ಗರ್ಭಧಾರಣೆಯ ಸಮಯದಲ್ಲಿ ಎಳನೀರು ಕುಡಿಯಬೇಕೋ, ಬೇಡವೋ? ಇದರ ಪರಿಣಾಮ ಏನಾಗಬಹುದು ಎಂಬ ಗೊಂದಲ ಕಾಡುವುದು ಬಹಳ ಸಹಜ.

Pic credit -  Pintrest

ಆದರೆ ಡಾ. ಶಿಲ್ಪಾ ಅವರು ಹೇಳುವ ಪ್ರಕಾರ ಗರ್ಭಿಣಿಯರು ಎಳನೀರನ್ನು ಕುಡಿಯಬಹುದು. ಇದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳಿದ್ದಾರೆ.

Pic credit -  Pintrest

ಸಾಮಾನ್ಯವಾಗಿ ಎಳನೀರು ದೇಹದಲ್ಲಿ ನೀರಿನಾಂಶ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಅದಲ್ಲದೆ ಇದರಿಂದ ಪೊಟ್ಯಾಶಿಯಂ, ಸೋಡಿಯಂ ಎಲ್ಲವೂ ಸಿಗುತ್ತದೆ.

Pic credit -  Pintrest

ಸುಸ್ತು ಹೆಚ್ಚಾದಾಗ ಎಳನೀರನ್ನು ಕುಡಿಯಬಹುದು. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Pic credit -  Pintrest

ನಿಯಮಿತವಾಗಿ ಎಳನೀರಿನ ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್ ಆಗುವ ಅಪಾಯ ಕಡಿಮೆಯಾಗುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಎಳನೀರನ್ನು ಕುಡಿಯುವ ಅವಶ್ಯಕತೆ ಇರುವುದಿಲ್ಲ.

Pic credit -  Pintrest

ಪ್ರತಿನಿತ್ಯ ಸೇವನೆ ಮಾಡಿದರೂ ಕೂಡ ಇದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ದೇಹಕ್ಕೆ ಇದು ಬಹಳ ಒಳ್ಳೆಯದು.

Pic credit -  Pintrest

ಕೆಲವರು ಎಳನೀರು ಕುಡಿಯುವುದರಿಂದ ಶೀತವಾಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ ಆದರೆ ಅದು ತಪ್ಪು. ಎಳನೀರಿನ ಸೇವನೆಯಿಂದ ತೊಂದರೆಗಳು ಆಗುವುದಿಲ್ಲ.

Pic credit -  Pintrest

ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯದೆಯೇ ತಿಂದರೆ ಏನಾಗುತ್ತೆ ಗೊತ್ತೆ?