30 October 2024

Pic credit - iStock

ಹಬ್ಬದ ವೇಳೆ ಅಜೀರ್ಣದಿಂದ ಪಾರಾಗಲು 5 ಸುಲಭ ಉಪಾಯಗಳು ಇಲ್ಲಿವೆ

Author: Sushma Chakre

ದೀಪಾವಳಿ ಹಬ್ಬ ಬಂದಿದೆ. ಈ ವೇಳೆ ಖಾರದ ತಿಂಡಿಗಳು, ಸಾಂಪ್ರದಾಯಿಕ ಸಿಹಿ ತಿಂಡಿಗಳನ್ನು ಮನೆಯಲ್ಲಿ ತಯಾರಿಸುವುದು ಸಾಮಾನ್ಯ. ಇವುಗಳನ್ನು ತಿಂದ ನಂತರ ಕೆಲವರಿಗೆ ಹೊಟ್ಟೆಯ ಸಮಸ್ಯೆ, ಅಜೀರ್ಣ ಉಂಟಾಗುತ್ತದೆ.

Pic credit - iStock

ಹಬ್ಬದ ಊಟದ ಬಳಿಕ ಅಜೀರ್ಣ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಐದು ಸರಳ ಮಾರ್ಗಗಳು ಇಲ್ಲಿವೆ.

Pic credit - iStock

ಆದಷ್ಟೂ ಹೈಡ್ರೇಟೆಡ್ ಆಗಿರಿ. ಸಾಕಷ್ಟು ನೀರು ಕುಡಿಯುವುದು ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು. ಜೀರ್ಣಕ್ರಿಯೆಗೆ ಸಹಾಯ ಮಾಡುವ ಶುಂಠಿ ಅಥವಾ ಪುದೀನಾ ಮುಂತಾದ ಬೆಚ್ಚಗಿನ ನೀರು ಅಥವಾ ಗಿಡಮೂಲಿಕೆ ಚಹಾಗಳನ್ನು ಸೇವಿಸಿ.

Pic credit - iStock

ಹಬ್ಬದ ಊಟದ ಬಳಿಕ ಹೊಟ್ಟೆ ಉಬ್ಬುವುದು ಮತ್ತು ಅಸ್ವಸ್ಥತೆಯನ್ನು ತಡೆಗಟ್ಟಲು ನಿಮಗೆ ಎಷ್ಟು ಬೇಕೋ ಅಷ್ಟನ್ನೇ  ಎಚ್ಚರಿಕೆಯಿಂದ ತಿನ್ನುವುದನ್ನು ಅಭ್ಯಾಸ ಮಾಡಿ.

Pic credit - iStock

ಜೀರ್ಣಕಾರಿ ಆರೋಗ್ಯಕ್ಕೆ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಂತಹ ಫೈಬರ್ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ. ಇವು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಮೊಸರು, ಶುಂಠಿ, ಅರಿಶಿನ ಮತ್ತು ಜೀರಿಗೆಯಂತಹ ಮಸಾಲೆಗಳನ್ನು ಹೆಚ್ಚು ಸೇವಿಸಿ.

Pic credit - iStock

ಹಬ್ಬದ ಭೋಜನದ ನಂತರ, ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Pic credit - iStock

ನೀವು ಅಜೀರ್ಣದಿಂದ ಪರದಾಡುತ್ತಿದ್ದರೆ ಶುಂಠಿ, ಪುದೀನಾ ಅಥವಾ ಕ್ಯಾಮೊಮೈಲ್‌ನಿಂದ ತಯಾರಿಸಿದ ಗಿಡಮೂಲಿಕೆ ಚಹಾಗಳು ಜೀರ್ಣಾಂಗವನ್ನು ಶಮನಗೊಳಿಸುತ್ತದೆ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

Pic credit - iStock