ಕಿಡ್ನಿಯ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುವ ಅತ್ಯುತ್ತಮ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ
ಕಿಡ್ನಿಯ ಆರೋಗ್ಯ
ಮೂತ್ರಪಿಂಡದ ಆರೋಗ್ಯಕ್ಕೆ ಕೆಂಪು ದ್ರಾಕ್ಷಿಯು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಅವುಗಳು ಮೂತ್ರಪಿಂಡಗಳ ಮೇಲೆ ರಕ್ಷಣಾತ್ಮಕ ಪರಿಣಾಮಗಳನ್ನು ಬೀರುವ ನೈಸರ್ಗಿಕ ಸಂಯುಕ್ತವನ್ನು ಹೊಂದಿರುತ್ತವೆ.
ಕೆಂಪು ದ್ರಾಕ್ಷಿ
ಮೊಟ್ಟೆಯ ಬಿಳಿಭಾಗವು ಹಳದಿ ಭಾಗದಲ್ಲಿ ಕಂಡುಬರುವ ರಂಜಕವಿಲ್ಲದೆ ಉತ್ತಮ ಗುಣಮಟ್ಟದ ಪ್ರೋಟೀನ್ ಮೂಲವನ್ನು ಒದಗಿಸುತ್ತದೆ. ಇದು ಮೂತ್ರಪಿಂಡದ ಕಾಯಿಲೆ ಇರುವ ವ್ಯಕ್ತಿಗಳಿಗೆ ಸೂಕ್ತವಾದ ಆಯ್ಕೆಯಾಗಿದೆ.
ಮೊಟ್ಟೆಯ ಬಿಳಿಭಾಗ
ಉತ್ಕರ್ಷಣ ನಿರೋಧಕಗಳು ಮತ್ತು ಕಡಿಮೆ ಪೊಟ್ಯಾಸಿಯಮ್ ಹೊಂದಿರುವ ಬೆರಿಹಣ್ಣುಗಳು ಮೂತ್ರಪಿಂಡ ಸ್ನೇಹಿ ಹಣ್ಣಾಗಿದ್ದು, ಕಿಡ್ನಿ ಕಾಯಿಲೆ ಇರುವವರಿಗೆ ಉತ್ತಮವಾಗಿದೆ.
ಬೆರಿ ಹಣ್ಣುಗಳು
ಬೆಳ್ಳುಳ್ಳಿ ಅಡುಗೆಗೆ ಪರಿಮಳವನ್ನು ನೀಡುತ್ತದೆ. ಇದರ ಜೊತೆಗೆ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುತ್ತದೆ.
ಬೆಳ್ಳುಳ್ಳಿ
ಸೇಬು ಫೈಬರ್ನ ಉತ್ತಮ ಮೂಲವಾಗಿದೆ. ಇದನ್ನು ಆಗಾಗ ಸೇವಿಸಬಹುದು ಅಥವಾ ವಿವಿಧ ಭಕ್ಷ್ಯಗಳಿಗೆ ಸೇರಿಸಬಹುದು.
ಸೇಬು ಹಣ್ಣು
ಆಲಿವ್ ಎಣ್ಣೆಯು ಹೃದಯಕ್ಕೆ ಆರೋಗ್ಯಕರ ಕೊಬ್ಬಾಗಿದ್ದು ಇದನ್ನು ಅಡುಗೆಗೆ ಮಿತವಾಗಿ ಬಳಸಬಹುದು.
ಆಲಿವ್ ಎಣ್ಣೆ
ಈರುಳ್ಳಿ ಕಡಿಮೆ ಪೊಟ್ಯಾಸಿಯಮ್ ತರಕಾರಿಯಾಗಿದ್ದು ಮೂತ್ರಪಿಂಡ ಸ್ನೇಹಿಯಾಗಿದೆ. ಇದನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿದರೆ ಹಲವು ಪ್ರಯೋಜನಗಳಿವೆ.