Author: Sushma Chakre

ಹಣ್ಣು - ಹಣ್ಣಿನ ಜ್ಯೂಸ್​ ಎರಡರಲ್ಲಿ ಯಾವುದು ಬೆಸ್ಟ್?

12 Dec 2023

Author: Sushma Chakre

ಹಣ್ಣುಗಳು ಮತ್ತು ಹಣ್ಣಿನ ಜ್ಯೂಸ್ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹಣ್ಣುಗಳನ್ನು ತಿನ್ನುವುದು ಒಳ್ಳೆಯದಾ? ಅಥವಾ ಜ್ಯೂಸ್ ಕುಡಿಯುವುದು ಒಳ್ಳೆಯದಾ? ಎಂಬ ಗೊಂದಲ ಸಾಮಾನ್ಯ. ಎರಡನ್ನೂ ಹಣ್ಣಿನಿಂದ ತಯಾರಿಸುವುದೇ ಆದರೂ ಎರಡರ ಪೌಷ್ಟಿಕಾಂಶಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ.

ಹಣ್ಣು ವರ್ಸಸ್ ಜ್ಯೂಸ್

ನೀವು ಆರೋಗ್ಯಕರ ಆಯ್ಕೆಯನ್ನು ಮಾಡಿಕೊಳ್ಳುವುದಾದರೆ ಜ್ಯೂಸ್​ಗಿಂತಲೂ ಹಣ್ಣುಗಳನ್ನು ತಿನ್ನುವುದೇ ಹೆಚ್ಚು ಪ್ರಯೋಜನಕಾರಿ. ಅದಕ್ಕಾಗಿಯೇ ವೈದ್ಯರು ಜ್ಯೂಸ್ ಬದಲಿಗೆ ತಾಜಾ ಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ.

ಹಣ್ಣು ಬೆಸ್ಟ್

ಹಣ್ಣಿನ ಜ್ಯೂಸ್‌ನ ಮುಖ್ಯ ಸಮಸ್ಯೆಯೆಂದರೆ ಅದು ಹೆಚ್ಚಿನ ಕ್ಯಾಲೋರಿಗಳು, ಆಮ್ಲದ ಅಂಶ ಮತ್ತು ಹೆಚ್ಚು ಸಕ್ಕರೆ, ಕಡಿಮೆ ಫೈಬರ್ ಅನ್ನು ಹೊಂದಿರುತ್ತದೆ. ಅದು ಪ್ರಮುಖ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಹಣ್ಣುಗಳನ್ನು ಅವುಗಳ ಜ್ಯೂಸ್​ಗಿಂತ ಹೆಚ್ಚು ಆರೋಗ್ಯಕರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲು ಕಾರಣಗಳು ಇಲ್ಲಿವೆ.

ಜ್ಯೂಸ್​ನಲ್ಲಿ ಏನಿರುತ್ತದೆ?

ಫೈಬರ್ ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಅಂಶವಾಗಿದೆ. ಇದು ಕರುಳಿನ ಆರೋಗ್ಯವನ್ನು ಸರಿಯಾಗಿ ಇಡುವುದು ಮಾತ್ರವಲ್ಲದೆ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸುತ್ತದೆ. ಆದರೆ ನಾವು ಹಣ್ಣುಗಳ ಬದಲಿಗೆ ಜ್ಯೂಸ್ ಅನ್ನು ಸೇವಿಸಿದಾಗ, ಹಣ್ಣಿನ ಎಲ್ಲಾ ಫೈಬರ್ ಫಿಲ್ಟರ್ ಆಗುತ್ತದೆ.

ಫೈಬರ್ ಕೊರತೆ

ಪ್ರತಿದಿನ ಒಂದು ಲೋಟ ಹಣ್ಣಿನ ಜ್ಯೂಸ್ ಕುಡಿಯುವುದು ಆ ದಿನವನ್ನು ಪ್ರಾರಂಭಿಸಲು ಆರೋಗ್ಯಕರ ಮಾರ್ಗವೆಂದು ಕೂಡ ಹೇಳುತ್ತಾರೆ. ಆದರೆ ಹಣ್ಣಿನ ಜ್ಯೂಸ್​ ತಾಜಾ ಹಣ್ಣಿನಷ್ಟು ಆರೋಗ್ಯಕರವಲ್ಲ ಎಂದು ನಿಮಗೆ ತಿಳಿದಿದೆಯೇ?

ದಿನವೂ 1 ಗ್ಲಾಸ್ ಜ್ಯೂಸ್ ಸೇವಿಸಿ

ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆದರೆ ಅದನ್ನು ಜ್ಯೂಸ್ ರೂಪದಲ್ಲಿ ಸೇವಿಸಿದಾಗ ಕ್ಯಾಲೋರಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಒಂದು ಲೋಟ ಜ್ಯೂಸ್ ಕುಡಿದರೆ ಅದರಲ್ಲಿ ಅನೇಕ ಹಣ್ಣುಗಳ ರಸವಿರುತ್ತದೆ. ನೀವು ಪ್ಯಾಕ್ಡ್ ಜ್ಯೂಸ್ ಅನ್ನು ಸೇವಿಸುತ್ತಿದ್ದರೆ ಅದಕ್ಕೆ ಸಕ್ಕರೆಯನ್ನು ಹಾಕುವುದರಿಂದ ಕ್ಯಾಲೊರಿಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಹೆಚ್ಚುವರಿ ಕ್ಯಾಲೋರಿಗಳು

ಹಣ್ಣಿನ ಜ್ಯೂಸ್​ ಅನ್ನು ಹಲವಾರು ಪ್ರಕ್ರಿಯೆಗಳ ಮೂಲಕ ಮಾಡಬೇಕಾಗುತ್ತದೆ. ಇದರಿಂದಾಗಿ ಅದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಮುಂತಾದ ಅನೇಕ ಸೂಕ್ಷ್ಮ ಪೋಷಕಾಂಶಗಳು ನಷ್ಟವಾಗುತ್ತದೆ.

ಸೂಕ್ಷ್ಮ ಪೋಷಕಾಂಶಗಳ ಕೊರತೆ

ಫೈಬರ್ ಸಮೃದ್ಧವಾಗಿರುವ ಹಣ್ಣುಗಳು ಕರುಳಿನ ಆರೋಗ್ಯ, ಕಡಿಮೆ ಎಲ್​ಡಿಎಲ್ ಕೊಲೆಸ್ಟ್ರಾಲ್, ಬೊಜ್ಜು ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.

ಬೊಜ್ಜನ್ನು ಕಡಿಮೆ ಮಾಡುತ್ತದೆ

ಹಣ್ಣಿನ ರಸದಲ್ಲಿನ ಸಕ್ಕರೆಯ ಅಂಶ ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗಬಹುದು ಮತ್ತು ಹಸಿವನ್ನು ಹೆಚ್ಚಿಸಬಹುದು, ಇದು ಕಾಲಾನಂತರದಲ್ಲಿ ತೂಕ ಹೆಚ್ಚಾಗಲು ಕಾರಣವಾಗಬಹುದು.

ಹಸಿವು ಹೆಚ್ಚಿಸಬಹುದು