ಕಣ್ಣಿನ ಆರೋಗ್ಯಕ್ಕೆ ದಿನಕ್ಕೊಂದು ಕ್ಯಾರೆಟ್ ತಿನ್ನಿ

24 Nov 2023

ಕ್ಯಾರೆಟ್​ನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್​ ಸಮೃದ್ಧವಾಗಿದೆ. ಕ್ಯಾರೆಟ್ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ.

ಪೌಷ್ಟಿಕಾಂಶಯುಕ್ತ ತರಕಾರಿ

ಕ್ಯಾರೆಟ್ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು. ಕ್ಯಾರೆಟ್​ನಲ್ಲಿ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಹೇರಳವಾಗಿದೆ.

ಕಣ್ಣಿನ ಆರೋಗ್ಯ

ಈ ಪೋಷಕಾಂಶಗಳ ಜೊತೆಗೆ ಕ್ಯಾರೆಟ್ ವಿಟಮಿನ್ ಸಿ, ಲುಟೀನ್, ಜಿಯಾಕ್ಸಾಂಥಿನ್, ವಿಟಮಿನ್ ಕೆ, ಡಯೆಟರಿ ಫೈಬರ್ ಇತ್ಯಾದಿಗಳ ಉತ್ತಮ ಮೂಲವಾಗಿದೆ.

ಹೇರಳ ಪೌಷ್ಟಿಕಾಂಶ

ಕ್ಯಾರೆಟಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ ಇದೆ. ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಕ್ಕಳ ಬೆಳವಣಿಗೆಗೆ ಸಹಕಾರಿ

ಬೀಟಾ-ಕೆರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಇರುಳುಗುರುಡುತನ ದೂರವಾಗಲು ಇದು ಅತ್ಯಗತ್ಯ.

ಇರುಳುಗುರುಡುತನಕ್ಕೆ ಪ್ರಯೋಜನಕಾರಿ

ಕ್ಯಾರೆಟ್‍ನಲ್ಲಿರುವ ಡಯೆಟರಿ ಫೈಬರ್, ಸಕ್ಕರೆ ಅಂಶ ರಕ್ತದಲ್ಲಿ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಕ್ಯಾರೆಟ್‍ನಲ್ಲಿ ವಿಟಮಿನ್ ಸಿ, ಕೆ ಮತ್ತು ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟಾಶಿಯಂ, ಕಾಪರ್, ಪ್ರಾಸ್ಪರಸ್‍ನಂತಹ ಮಿನರಲ್ಸ್​ಗಳಿವೆ.

ವಿಟಮಿನ್​ಯುಕ್ತ ಕ್ಯಾರೆಟ್

ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಫಾಲ್‍ಕ್ಯಾರಿನೋಲ್ ಎಂಬ ಆ್ಯಂಟಿಆಕ್ಸಿಡೆಂಟ್ ಕ್ಯಾರೆಟ್​ನಲ್ಲಿ ಇದೆ.

ಕ್ಯಾನ್ಸರ್ ವಿರೋಧಿ

ಕ್ಯಾರೆಟ್‍ದೃಷ್ಟಿಗೆ ಒಳ್ಳೆಯದು. ಕ್ಯಾರೆಟ್ ವಿಟಮಿನ್ ಎಯ ಆಗರ. ವಿಟಮಿನ್ ಎ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು. ನಿತ್ಯವೂ ಕ್ಯಾರೆಟ್ ತಿನ್ನುವುದರಿಂದ ಇರುಳುಗಣ್ಣು ಸೇರಿದಂತೆ ದೃಷ್ಟಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ದೂರವಿರಬಹುದು.

ದೃಷ್ಟಿ ಸಮಸ್ಯೆಗೆ ಪರಿಹಾರ