ಪನೀರ್ ಟಿಕ್ಕಾ ತಿನ್ನುವುದರಿಂದಾಗುವ 7 ಆರೋಗ್ಯ ಪ್ರಯೋಜನಗಳಿವು
27 Dec 2023
Author: Sushma Chakre
ಕಾಟೇಜ್ ಚೀಸ್ ಅಥವಾ ಪನೀರ್ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ನೀವು ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದರೆ ಇದು ಉತ್ತಮ ಆಯ್ಕೆ.
ಪ್ರೋಟೀನ್‌ನ ಉತ್ತಮ ಮೂಲ
ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.
ತೂಕ ಇಳಿಸಲು ಸಹಕಾರಿ
ಪನೀರ್ ಕೇವಲ ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸುವುದಿಲ್ಲ ಸ್ನಾಯುಗಳು ಚೇತರಿಸಿಕೊಳ್ಳಲು ಮತ್ತು ಬೆಳೆಯಲು ಅನುವು ಮಾಡಿಕೊಡುತ್ತದೆ.
ಸ್ನಾಯುಗಳನ್ನು ಬಲಪಡಿಸುತ್ತದೆ
ಪನೀರ್ ಕಡಿಮೆ ಗ್ಲೈಸೆಮಿಕ್ ಸ್ಕೋರ್ ಹೊಂದಿರುವುದರಿಂದ ಮಧುಮೇಹಿಗಳಿಗೆ ಅದ್ಭುತ ಆಹಾರವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇರುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ
ಎಲುಬುಗಳನ್ನು ಬಲಪಡಿಸಲು ಮನುಷ್ಯನ ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ. ಆದರೆ ಇದು ಶಾಂತಿಯುತ ನಿದ್ರೆಯ ಜೊತೆಗೆ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಕೂಡ ಸುಧಾರಿಸುತ್ತದೆ. ವಿಟಮಿನ್ ಡಿಯ ಕೆಲವು ಲಕ್ಷಣಗಳು ಇಲ್ಲಿವೆ.
ವಿಟಮಿನ್ ಡಿ ಏಕೆ ಮುಖ್ಯ?
ಪನೀರ್ ಕ್ಯಾಲ್ಸಿಯಂ ಮತ್ತು ಫಾಸ್ಪರಸ್‌ನ ಉತ್ತಮ ಮೂಲವಾಗಿದೆ. ಮೂಳೆಗಳ ಉತ್ತಮ ಸಾಂದ್ರತೆ ಮತ್ತು ಬಲವಾದ ಹಲ್ಲುಗಳನ್ನು ನಿರ್ಮಿಸಲು ಈ ಎರಡೂ ಪೋಷಕಾಂಶಗಳು ಅವಶ್ಯಕ.
ಮೂಳೆಗಳು ಮತ್ತು ಹಲ್ಲುಗಳಿಗೆ ಒಳ್ಳೆಯದು
ಪನೀರ್‌ನಲ್ಲಿ ಹೆಚ್ಚಿನ ಮಟ್ಟದ ಸತುವು ಇರುವುದರಿಂದ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರದ ಪ್ರಮುಖ ಅಂಶವಾಗಿದೆ. ಶೀತ, ಜ್ವರ ಮತ್ತು ವೈರಲ್ ಸೋಂಕುಗಳಂತಹ ಸಾಮಾನ್ಯ ಕಾಯಿಲೆಗಳಿಂದ ಚೇತರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ
ಪನೀರ್ ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಸಿರೊಟೋನಿನ್ ಮತ್ತು ನರಪ್ರೇಕ್ಷಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.