ನಿದ್ರೆಗೂ ನಿಮ್ಮ ತೂಕಕ್ಕೂ ಏನು ಸಂಬಂಧ?

21 NOV 2023

ತೂಕ ಹೆಚ್ಚಾಗಲು ಕೊಬ್ಬು ಮಾತ್ರ ಕಾರಣವಲ್ಲ. ನಮ್ಮ ಜೀವನಶೈಲಿ, ನಿದ್ರೆಯ ಪ್ರಮಾಣವೂ ಕಾರಣವಾಗುತ್ತದೆ.

ನಿದ್ರೆಯಿಂದಲೂ ತೂಕ ಹೆಚ್ಚಳ

ನಿದ್ರೆ ಕಡಿಮೆಯಾದರೆ ಹಾರ್ಮೋನಿನಲ್ಲೂ ವ್ಯತ್ಯಾಸವಾಗುತ್ತದೆ. 

ಹಾರ್ಮೋನ್ ಬದಲಾವಣೆ

ಗ್ರೆಲಿನ್ ಹಸಿವನ್ನು ಉತ್ತೇಜಿಸುವ ಹಾರ್ಮೋನ್ ಆಗಿದ್ದು, ಲೆಪ್ಟಿನ್ ಪೂರ್ಣತೆಯನ್ನು ಸಂಕೇತಿಸುತ್ತದೆ. 

ಹಾರ್ಮೋನ್​ಗಳ ಕೆಲಸವೇನು?

ನೀವು ನಿದ್ರೆಯನ್ನು ಸರಿಯಾಗಿ ಮಾಡದಿದ್ದಾಗ ಗ್ರೆಲಿನ್ ಮಟ್ಟ ಹೆಚ್ಚಾಗುತ್ತದೆ, ಲೆಪ್ಟಿನ್ ಮಟ್ಟ ಕಡಿಮೆಯಾಗುತ್ತವೆ.

ಹಾರ್ಮೋನ್ ಏರುಪೇರು

ಇದು ಅತಿಯಾಗಿ ತಿನ್ನಲು ನಿಮ್ಮನ್ನು ಪ್ರೇರೇಪಿಸುತ್ತದೆ. ಆಗ ನಿಮಗೆ ಹಸಿವಿಲ್ಲದಿದ್ದರೂ ಸಿಕ್ಕಿದ ತಿಂಡಿಯನ್ನೆಲ್ಲ ತಿನ್ನಲಾರಂಭಿಸುತ್ತೀರಿ. ಇದರಿಂದ ತೂಕ ಹೆಚ್ಚಾಗುತ್ತದೆ.

ವಿಪರೀತ ತಿನ್ನುತ್ತೀರಾ?

ನಿದ್ರೆಯ ಕೊರತೆಯಿಂದ ರಾತ್ರಿ ವೇಳೆ ಹಸಿವು ಜಾಸ್ತಿಯಾಗುತ್ತದೆ. ರಾತ್ರಿ ಏನಾದರೂ ತಿನ್ನಬೇಕೆಂಬ ಬಯಕೆ ಮೂಡುತ್ತದೆ. ಆಗ ದೇಹದಲ್ಲಿ ಕೊಬ್ಬಿನಾಂಶ, ಸಕ್ಕರೆ ಅಂಶಗಳು ಹೆಚ್ಚಾಗುತ್ತದೆ.

ರಾತ್ರಿ ಹಸಿವಾಗುತ್ತದಾ?

 ಪ್ರತಿ ರಾತ್ರಿ 7ರಿಂದ 9 ಗಂಟೆಗಳ ನಿರಂತರ ನಿದ್ರೆ ಮಾಡುವುದು ಅಗತ್ಯ. ನಿಮ್ಮ ಕೊಠಡಿಯನ್ನು ಕತ್ತಲಾಗಿರಿಸಿಕೊಂಡು ಮಲಗಿ. ಇದರಿಂದ ನಿದ್ರೆಗೆ ಅಡ್ಡಿ ಉಂಟಾಗುವುದಿಲ್ಲ.

ಎಷ್ಟು ನಿದ್ರೆ ಅಗತ್ಯ?

NEXT: ಮೆದುಳು ಚುರುಕಾಗಲು ನೆನೆಸಿಟ್ಟ ಖರ್ಜೂರ ತಿನ್ನಿ