ಶವರ್ಮಾದಲ್ಲೂ ಅಪಾಯಕಾರಿ ಬಾಕ್ಟೀರಿಯಾ ಪತ್ತೆ
01 July 2024
Pic credit - Pintrest
Author : Akshatha Vorkady
Pic credit - Pintrest
ಗೋಬಿ, ಕಬಾಬ್, ಪಾನಿಪುರಿ ಬಳಿಕ ಶವರ್ಮಾಗೂ ಕಂಟಕ ಎದುರಾಗಿದೆ. ಶವರ್ಮಾ ಬ್ಯಾನ್ಗೆ ಆಹಾರ & ಗುಣಮಟ್ಟ ಇಲಾಖೆ ಚಿಂತನೆ ನಡೆಸಿದೆ.
ಶವರ್ಮಾ ಬ್ಯಾನ್
Pic credit - Pintrest
ಆರೋಗ್ಯದ ದೃಷ್ಟಿಯಿಂದ ಶವರ್ಮಾ ನಿಷೇಧಿಸಲು ಚಿಂತನೆ ನಡೆದಿದೆ. ಕರ್ನಾಟಕದ ವಿವಿಧೆಡೆಯಿಂದ 17 ಶವರ್ಮಾ ಮಾದರಿ ಪರೀಕ್ಷೆ ನಡೆಸಲಾಗಿದೆ.
ಮಾದರಿ ಪರೀಕ್ಷೆ
Pic credit - Pintrest
17ರ ಪೈಕಿ 8 ಮಾದರಿಯಲ್ಲಿ ಬ್ಯಾಕ್ಟೀರಿಯಾ ಈಸ್ಟ್ ಪತ್ತೆಯಾಗಿದೆ. ಸರಿಯಾದ ರೀತಿಯಲ್ಲಿ ಆಹಾರ ತಯಾರಿಸದ ಕಾರಣ ಬಾಕ್ಟೀರಿಯಾಗಳು ಪತ್ತೆಯಾಗಿವೆ.
ಬಾಕ್ಟೀರಿಯಾಗಳು ಪತ್ತೆ
Pic credit - Pintrest
ಅಸುರಕ್ಷಿತ ಶವರ್ಮಾ ನೀಡಿರುವ ಅಂಗಡಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಶವರ್ಮಾ ಮಾರಾಟಗಾರರಿಗೆ FSSAI ನೋಂದಣಿ ಕಡ್ಡಾಯಗೊಳಿಸಲಾಗಿದೆ.
ಶವರ್ಮಾ ಮಾರಾಟ
Pic credit - Pintrest
ಮಾರಾಟಗಾರರು ನೋಂದಣಿ ಪತ್ರ ಪ್ರದರ್ಶನ ಮಾಡದಿದ್ದರೆ ಶವರ್ಮಾ ಮಾರಾಟವನ್ನು ಬ್ಯಾನ್ ಮಾಡುವ ಎಚ್ಚರಿಕೆ ನೀಡಲಾಗಿದೆ.
ಶವರ್ಮಾ ಬ್ಯಾನ್
Pic credit - Pintrest
ಶವರ್ಮಾ ತಯಾರಿಕೆ ವೇಳೆ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಲಾಗಿದ್ದು ಶುಚಿತ್ವ ನಿರ್ವಹಣೆ ಮಾಡಿಸದಿದ್ರೆ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಶುಚಿತ್ವ ನಿರ್ವಹಣೆ
Pic credit - Pintrest
ಈ ಹಿಂದೆ ಶವರ್ಮಾ ಸೇವಿಸಿ ಮೃತಪಟ್ಟ ಹಾಗೂ ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆ ಸೇರಿರುವಂತಹ ಅದೇಷ್ಟೋ ಘಟನೆಗಳು ವರದಿ ಆಗಿವೆ.
ಮೃತಪಟ್ಟ ಘಟನೆ
Next: ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಣ್ಣುಗಳಿವು