ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಮತ್ತು ಔಷಧಿಯನ್ನು ಸೇವಿಸುವ ಮೂಲಕ ಫುಡ್ ಪಾಯ್ಸನ್ನಿಂದ ಪರಿಹಾರ ಪಡೆಯಬಹುದು. ಫುಡ್ ಪಾಯ್ಸನಿಂಗ್ನಿಂದ ಬಳಲುವಾಗ ನೀವು ಯಾವ ರೀತಿಯ ಆಹಾರ ಸೇವಿಸಬೇಕೆಂಬ ಮಾಹಿತಿ ಇಲ್ಲಿದೆ.
ಫುಡ್ ಪಾಯ್ಸನ್
ಹಸಿ ತರಕಾರಿಗಳಿಗಿಂತಲೂ ಹಬೆಯಲ್ಲಿ ಬೇಯಿಸಿದ ಅಥವಾ ನೀರಿನಲ್ಲಿ ಬೇಯಿಸಿದ ತರಕಾರಿಗಳು ಜೀರ್ಣಿಸಿಕೊಳ್ಳಲು ಸುಲಭ. ಇವು ಜೀರ್ಣಾಂಗವನ್ನು ಆಯಾಸಗೊಳಿಸದೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಬೇಯಿಸಿದ ತರಕಾರಿಗಳು
ಪ್ರೋಬಯಾಟಿಕ್ ಸಮೃದ್ಧವಾದ ಮೊಸರು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗದ ಚೇತರಿಕೆಗೆ ಸಹಾಯ ಮಾಡುತ್ತದೆ.
ಮೊಸರು
ಬಾಳೆಹಣ್ಣು, ಅನ್ನ, ಸೇಬು ಮತ್ತು ಟೋಸ್ಟ್ ಅನ್ನು ಒಳಗೊಂಡಿರುವ ಈ ಆಹಾರವನ್ನು ಸಾಮಾನ್ಯವಾಗಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಫುಡ್ ಪಾಯ್ಸನ್ ಲಕ್ಷಣಗಳನ್ನು ಬಗೆಹರಿಸಲು ನೀಡಲಾಗುತ್ತದೆ.
ಬ್ರಾಟ್ ಡಯಟ್
ಚಿಕನ್ ಅಥವಾ ತರಕಾರಿ ಸಾರುಗಳಂತಹ ಸರಳವಾದ, ಸುಲಭವಾಗಿ ಜೀರ್ಣವಾಗುವ ಸೂಪ್‌ಗಳು ಜೀರ್ಣಾಂಗ ವ್ಯವಸ್ಥೆಯನ್ನು ಕಿರಿಕಿರಿಗೊಳಿಸದೆ ಪೋಷಣೆಯನ್ನು ಒದಗಿಸುತ್ತದೆ.
ಬ್ಲಾಂಡ್ ಸೂಪ್
ಕಲ್ಲಂಗಡಿಗಳಂತಹ ಸೌಮ್ಯವಾದ ಹಣ್ಣುಗಳು ಜೀರ್ಣಕ್ರಿಯೆಗೆ ತೊಂದರೆಯಾಗದಂತೆ ಜಲಸಂಚಯನ ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ.
ತಾಜಾ ಹಣ್ಣುಗಳು
ಕ್ಯಾಮೊಮೈಲ್ ಅಥವಾ ಪುದೀನಾ ಟೀ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗಗೊಳಿಸಲು ಮತ್ತು ವಾಂತಿ, ಭೇದಿಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಗಿಡಮೂಲಿಕೆ ಚಹಾ
ನೀರು, ಗಿಡಮೂಲಿಕೆ ಚಹಾ, ಶುಂಠಿ ಟೀ, ಓಆರ್ಎಸ್, ಗ್ಲೂಕೋಸ್ ಮುಂತಾದ ಪಾನೀಯವನ್ನು ಸೇವಿಸಿ. ಇವು ಹೈಡ್ರೇಟೆಡ್ ಆಗಿರಲು ಮತ್ತು ನಿಮ್ಮ ದೇಹದಿಂದ ಕಳೆದುಹೋದ ಎಲೆಕ್ಟ್ರೋಲೈಟ್‌ಗಳನ್ನು ಪುನಃ ನೀಡಲು ಸಹಾಯ ಮಾಡುತ್ತದೆ.