ಬಿಸಿ ನೀರು ಕುಡಿಯುವುದರಿಂದ ಆಗುವ ಸಮಸ್ಯೆಗಳೇನು?
27 September 2024
Pic credit - pinterest
Preethi Bhat Gunavante
ಬಿಸಿ ನೀರು ಕುಡಿಯುವುದರಿಂದ ಕೆಲವು ಲಾಭದ ಜೊತೆಗೆ ಅಡ್ಡ ಪರಿಣಾಮಗಳು ಇವೆ. ಅವುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
Pic credit - pinterest
ಡಾ. ತ್ರಿಮೂರ್ತಿ ಅವರು ನೀಡಿರುವ ಸಲಹೆಯ ಪ್ರಕಾರ ಅತಿಯಾದ ಬಿಸಿ ನೀರಿನ ಸೇವನೆ ದೇಹಕ್ಕೆ ಒಳ್ಳೆಯದಲ್ಲ.
Pic credit - pinterest
ಬಿಸಿ ನೀರು ಅತಿಯಾಗಿ ಬಿಸಿ ಇರಬಾರದು. ಉಗುರು ಬೆಚ್ಚಗಿನ ಅಥವಾ ಹದವಾದ ನೀರನ್ನು ಕುಡಿಯುವುದು ಮಾತ್ರ ಲಾಭಕಾರಿಯಾಗಿದೆ.
Pic credit - pinterest
ಅತಿಯಾದ ಬಿಸಿನೀರಿನ ಸೇವನೆ ಅನ್ನನಾಳ, ನಾಲಿಗೆ, ಹೊಟ್ಟೆ ಮೇಲಿನ ತೆಳುವಾದ ಪದರವನ್ನು ಸುಡಲು ಪ್ರಾರಂಭಿಸುತ್ತದೆ.
Pic credit - pinterest
ಅತಿಯಾದ ಬಿಸಿನೀರು ಅಥವಾ ಕಷಾಯ ಕುಡಿದರೆ ಅಲ್ಸರ್, ಎಸಿಡಿಟಿ ಸಮಸ್ಯೆ, ಗಂಟಲು ನೋವು ಕೂಡ ಹೆಚ್ಚಾಗುತ್ತದೆ.
Pic credit - pinterest
ಬೇಸಿಗೆ ಅಥವಾ ಹೆಚ್ಚು ಬಿಸಿಲಿರುವ ಸಮಯದಲ್ಲಿ ಬಿಸಿ ನೀರಿನ ಸೇವನೆಯನ್ನು ಮಾಡದಿರುವುದು ಉತ್ತಮ.
Pic credit - pinterest
ಅತಿಯಾಗಿ ಬಿಸಿಯಾದ ನೀರು ಕುಡಿಯುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ. ಅದರ ಬದಲು ಉಗುರು ಬೆಚ್ಚಗಿನ ನೀರನ್ನು ಸೇವನೆ ಮಾಡಿ.
Pic credit - pinterest
Next: 30 ದಾಟಿದ ಮಹಿಳೆಯರು ಈ ಕೆಲಸಗಳನ್ನು ತಪ್ಪದೇ ಮಾಡಬೇಕು