17 February 2025
Pic credit - Pintrest
Preethi Bhat
ಸರ್ಪಸುತ್ತನ್ನು ಹತೋಟಿಗೆ ತರುವುದು ಹೇಗೆ?
ಸಾಮಾನ್ಯವಾಗಿ ಪಿತ್ತದೋಷದಿಂದ ಸರ್ಪಸುತ್ತು ಕಾಡುತ್ತದೆ, ದೇಹದಲ್ಲಿ ತ್ರಿದೋಷಗಳು ಸಮುತೋಲನ ಕಳೆದುಕೊಂಡಾಗಲೂ ಈ ಸಮಸ್ಯೆ ಎದುರಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
Pic credit - Pintrest
ಆಯುರ್ವೇದದ ಪ್ರಕಾರ, ನಿರಾಹಾರ ಇಲ್ಲವೇ ಲಘು ಆಹಾರ ಸೇವನೆಯಿಂದ ಸರ್ಪಸುತ್ತನ್ನು ಹತೋಟಿಗೆ ತರಬಹುದು.
Pic credit - Pintrest
ರಕ್ತ ಶುದ್ಧಿಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಮೃತ ಬಳ್ಳಿಯ ಕಷಾಯ ಸೇವನೆ ಮಾಡಬಹುದು. ಅಥವಾ ಎಳನೀರನ್ನು ಕೆಂಪು ಕಲ್ಲುಸಕ್ಕರೆಯೊಂದಿಗೆ ಕುಡಿಯುವುದು.
Pic credit - Pintrest
ಜ್ಯೇಷ್ಠಮಧು ಚೂರ್ಣ ಹಾಗೂ ಬೇವಿನ ಎಲೆಯನ್ನು ಅರೆದು ಲೇಪ ಹಚ್ಚುವುದರಿಂದ ಗಾಯಗಳು ವಾಸಿಯಾಗುತ್ತವೆ ಅಥವಾ ಲೋಳೆಸರ, ಜೇನು ತುಪ್ಪವನ್ನು ಸಮಪ್ರಮಾಣದಲ್ಲಿ ಕಲಸಿ ಹಚ್ಚಬಹುದು.
Pic credit - Pintrest
ರಕ್ತಚಂದನ ಚೂರ್ಣ, ಅರ್ಜುನ ಮರದ ತೊಗಟೆಯ ಚೂರ್ಣವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದು ಬಹಳ ಒಳ್ಳೆಯದು.
Pic credit - Pintrest
ವೈದ್ಯರು ಹೇಳುವ ಪ್ರಕಾರ, ಪಂಚಕರ್ಮ ಚಿಕಿತ್ಸೆ ಮಾಡಿಸಿ ಬಳಿಕ ಔಷಧ ಮಾಡಿದರೆ ಈ ಸಮಸ್ಯೆಗೆ ಉತ್ತಮ ಪರಿಹಾರ ದೊರೆಯುತ್ತದೆ.
Pic credit - Pintrest
ಸಾಮಾನ್ಯವಾಗಿ ಸರ್ಪಸುತ್ತು ಕಾಣಿಸಿಕೊಂಡರೆ ಮಕ್ಕಳಿಂದ ಅಂತರ ಕಾಯ್ದುಕೊಳ್ಳಿ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ವಸ್ತುಗಳ ನಡುವೆ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ.
Pic credit - Pintrest
ದಾಸವಾಳದ ಕೂದಲಿನ ಸೌಂದರ್ಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು
ಇದನ್ನೂ ಓದಿ