Pic Credit: pinterest
By Sai Nanda
11 September 2025
ಇತ್ತೀಚೆಗಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಸಮಸ್ಯೆಯೂ ಬಹುತೇಕರನ್ನು ಕಾಡುತ್ತಿದೆ.
ಮಧುಮೇಹಿಗಳು ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು. ಸ್ವಲ್ಪ ವ್ಯತ್ಯಾಸವಾದ್ರೂ ಶುಗರ್ ಲೆವೆಲ್ ಹೆಚ್ಚಾಗುತ್ತದೆ.
ದಾಲ್ಚಿನ್ನಿ ಸಹ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಅಡುಗೆಯಲ್ಲಿ ದಾಲ್ಚಿನ್ನಿ ಬಳಕೆಯಿಂದ ಆರೋಗ್ಯ ಲಾಭಗಳು ಅಧಿಕವಾಗಿದೆ.
ಅಡುಗೆಯ ರುಚಿ ಹೆಚ್ಚಿಸುವ ಈ ದಾಲ್ಚಿನ್ನಿಯಲ್ಲಿ ಪೊಟ್ಯಾಸಿಯಮ್, ಜೀವಸತ್ವಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅನೇಕ ಉತ್ಕರ್ಷಣ ನಿರೋಧಕಗಳಿವೆ.
ದಾಲ್ಚಿನ್ನಿ ಸೇವನೆಯೂ ಇನ್ಸುಲಿನ್ ಮಟ್ಟವನ್ನು ಸುಧಾರಿಸಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.
ದಾಲ್ಚಿನ್ನಿ ಸೇವನೆಯೂ ಮಧುಮೇಹಿಗಳಲ್ಲಿ ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯದ ಕಾಯಿಲೆಯ ಅಪಾಯವನ್ನು ತಡೆಯುತ್ತದೆ.
ದಾಲ್ಚಿನ್ನಿಯಿಂದ ಚಹಾ ತಯಾರಿಸಿ ಅಥವಾ ಹಾಲಿನಲ್ಲಿ ಬೆರೆಸಿ ಸೇವಿಸಬಹುದು. ದಿನಕ್ಕೆ ಗರಿಷ್ಠವೆಂದರೆ 6 ಗ್ರಾಂ ದಾಲ್ಚಿನ್ನಿ ಸೇವಿಸಬಹುದು.
ಮಧುಮೇಹಿಗಳು ದಾಲ್ಚಿನ್ನಿ ಸೇವನೆಗೂ ಮುನ್ನ ಸೂಕ್ತ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.