ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದರಿಂದಲೂ ಆರೋಗ್ಯಕ್ಕೆ ಕುತ್ತು

28 Nov 2023

Author: Sushma Chakre

ಪ್ರತಿದಿನ ದೀರ್ಘಾವಧಿಯವರೆಗೆ ಕುಳಿತುಕೊಳ್ಳುವುದರಿಂದ ನಿಮ್ಮ ಮೆದುಳು ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಹಲವು ರೀತಿಯ ಕೆಟ್ಟ ಪರಿಣಾಮಗಳು ಬೀರುತ್ತವೆ. ಈಗಂತೂ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರೇ ಹೆಚ್ಚು.

ಕಂಪ್ಯೂಟರ್ ಮುಂದೆ ಕೂರುತ್ತೀರಾ?

ದಿನಕ್ಕೆ 9ರಿಂದ 10 ಗಂಟೆಗಳ ಕಾಲ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಬೆನ್ನು ನೋವು, ಭುಜ ನೋವು, ಸೊಂಟ ನೋವು ಹೀಗೆ ನಾನಾ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿದೆ.

ಆರೋಗ್ಯ ಸಮಸ್ಯೆ ಸಾಮಾನ್ಯ

ದೀರ್ಘಕಾಲ ಕುಳಿತುಕೊಳ್ಳುವುದರಿಂದ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದು ಅರಿವಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ನರವೈಜ್ಞಾನಿಕ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಮೆದುಳಿಗೆ ರಕ್ತದ ಹರಿವು ಕಡಿಮೆ

ಒಂದೇ ಕಡೆ ದಿನವಿಡೀ ಕುಳಿತುಕೊಳ್ಳುವುದರಿಂದ ವಯಸ್ಕರಲ್ಲಿ ಅರಿವಿನ ಸಮಸ್ಯೆ ಮತ್ತು ಬುದ್ಧಿಮಾಂದ್ಯತೆಯ ಅಪಾಯ ಹೆಚ್ಚಾಗುತ್ತದೆ.

ಬುದ್ಧಿಮಾಂದ್ಯತೆ

ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ಕಾರ್ಯಗಳ ಮೇಲೆ ಏಕಾಗ್ರತೆ ಮತ್ತು ಗಮನವನ್ನು ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಇದರಿಂದ ನಿಮ್ಮ ಕೆಲಸದ ಸಾಮರ್ಥ್ಯವೂ ಕಡಿಮೆ ಆಗುತ್ತದೆ.

ಏಕಾಗ್ರತೆಯ ತೊಂದರೆ

ಒಂದೇ ಕಡೆ ಕುಳಿತುಕೊಂಡೇ ಇರುವುದು ಖಿನ್ನತೆ ಮತ್ತು ಆತಂಕದಂತಹ ಮೂಡ್ ಡಿಸಾರ್ಡರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ.

ಖಿನ್ನತೆ

ಬಹಳಷ್ಟು ಸಮಯ ಒಂದೆಡೆ ಕುಳಿತುಕೊಳ್ಳುವುದು ಹೆಚ್ಚಿದ ಒತ್ತಡದ ಮಟ್ಟಗಳಿಗೆ ಕಾರಣವಾಗಬಹುದು. ಇದು ಮೆದುಳಿನ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಮಾನಸಿಕ ಒತ್ತಡ

ದೀರ್ಘ ಸಮಯದವರೆಗೆ ಕುಳಿತುಕೊಳ್ಳುವುದರಿಂದ ಮೆದುಳಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಪಾರ್ಶ್ವವಾಯು ಸೇರಿದಂತೆ ಹೃದಯರಕ್ತನಾಳದ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.

ಪಾರ್ಶ್ವವಾಯು ಅಪಾಯ

ದೀರ್ಘ ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ಆರೋಗ್ಯದ ಮೇಲಾಗುವ ಸಮಸ್ಯೆಗಳನ್ನು ತಪ್ಪಿಸಲು ಆಗಾಗ ವಿರಾಮ ತೆಗೆದುಕೊಳ್ಳುವುದು, ನಿಮ್ಮ ಕುಳಿತುಕೊಳ್ಳುವ ಭಂಗಿಯನ್ನು ಬದಲಾಯಿಸುವುದು, ಮೆದುಳಿನ ಆರೋಗ್ಯವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ.

ಕುಳಿತುಕೊಳ್ಳುವ ಭಂಗಿ ಬದಲಿಸಿ