01-01-2024

ಮೆದುಳನ್ನು ಚುರುಕುಗೊಳಿಸಲು ಈ ಆಹಾರಗಳನ್ನು ಸೇವಿಸಿ

Author: ಗಣಪತಿ ಶರ್ಮ

ಡಾರ್ಕ್ ಚಾಕೊಲೇಟ್​ಗಳಲ್ಲಿ ಫ್ಲೇವನಾಯ್ಡ್​ಗಳು ಸಮೃದ್ಧವಾಗಿದೆ. ಇವು ಮೆದುಳಿಗೆ ತುಂಬಾ ಪ್ರಯೋಜನಕಾರಿ.

ಡಾರ್ಕ್ ಚಾಕೊಲೇಟ್ ಆಕ್ಸಿಡೇಟಿವ್ ಹಾನಿಯನ್ನು ಕಡಿಮೆ ಮಾಡುತ್ತದೆ.

ಕಲ್ಲಂಗಡಿ ಬೀಜಗಳು ಸಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವು ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿಸುತ್ತವೆ.

ಇವುಗಳಲ್ಲಿ ಸತು, ಕಬ್ಬಿಣ ಮತ್ತು ತಾಮ್ರದ ಅಂಶ ಸೇರಿವೆ. ಇವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ಕಾಳುಗಳು ಮತ್ತು ಬೀಜಗಳು ಮೆದುಳಿಗೆ ಉತ್ತಮ ಆಹಾರಗಳಾಗಿವೆ. ಇವು ಮಿದುಳಿನ ಜೀವಕೋಶಗಳನ್ನು ಆರೋಗ್ಯವಾಗಿಡುವುದಲ್ಲದೆ ಉತ್ತಮವಾಗಿ ಕೆಲಸ ಮಾಡಲು ನೆರವಾಗುತ್ತವೆ.

ಬೀಜಗಳಲ್ಲಿರುವ ಇರುವ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತವೆ.

ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ನರಕೋಶಗಳು ಸಮರ್ಪಕವಾಗಿರುವುದು ಅವಶ್ಯಕ. ಒಮೆಗಾ -3 ಕೊಬ್ಬಿನಾಮ್ಲಗಳು ನ್ಯೂರಾನ್‌ಗಳನ್ನು ತಯಾರಿಸಲು ಅವಶ್ಯ.

ಸಾಲ್ಮನ್ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇವುಗಳನ್ನು ತೆಗೆದುಕೊಳ್ಳುವುದರಿಂದ ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ.