ಜಪಾನೀಸ್ ವಾಟರ್ ಥೆರಪಿ ಬಗ್ಗೆ ನಿಮಗೆಷ್ಟು ಗೊತ್ತು?

21 nov 2023

ಜಪಾನೀಸ್ ವಾಟರ್ ಥೆರಪಿಯು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಮತ್ತು ಕರುಳಿನ ಆರೋಗ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಏನಿದು ಜಪಾನೀಸ್ ವಾಟರ್ ಥೆರಪಿ?

ಬೆಳಗ್ಗೆ ಎಚ್ಚರವಾದ ನಂತರ ಖಾಲಿ ಹೊಟ್ಟೆಯಲ್ಲಿ ತುಸು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದ ನಾನಾ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.

ನೀರಿನ ಚಿಕಿತ್ಸೆ

ಜಪಾನೀಸ್ ವಾಟರ್ ಥೆರಪಿಯ ಪ್ರಕಾರ ತಣ್ಣನೆಯ ನೀರು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಇದು ನಿಮ್ಮ ಆಹಾರದಲ್ಲಿನ ಕೊಬ್ಬುಗಳು ಮತ್ತು ತೈಲಗಳು ನಿಮ್ಮ ಜೀರ್ಣಾಂಗದಲ್ಲಿ ಗಟ್ಟಿಯಾಗುವಂತೆ ಮಾಡುತ್ತದೆ.

ತಣ್ಣೀರು ಕುಡಿಯಬೇಡಿ

ಬೆಳಗ್ಗೆ ಎದ್ದ ನಂತರ ಮತ್ತು ಹಲ್ಲುಜ್ಜುವ ಮೊದಲು ಖಾಲಿ ಹೊಟ್ಟೆಯಲ್ಲಿ 4ರಿಂದ 5 ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ. ಇದಾದ ನಂತರ 45 ನಿಮಿಷದ ನಂತರವೇ ತಿಂಡಿ ಸೇವಿಸಿ.

ಬೆಚ್ಚಗಿನ ನೀರು ಕುಡಿಯಿರಿ

ಜಪಾನ್ ವಾಟರ್ ಥೆರಪಿಯನ್ನು ಮಲಬದ್ಧತೆಗೆ 10 ದಿನ, ಅಧಿಕ ರಕ್ತದೊತ್ತಡಕ್ಕೆ 30 ದಿನ, ಟೈಪ್ 2 ಮಧುಮೇಹಕ್ಕೆ 30 ದಿನಗಳು, ಕ್ಯಾನ್ಸರ್ ರೋಗಕ್ಕೆ 180 ದಿನಗಳು ನಿರಂತರವಾಗಿ ಮಾಡಬೇಕಾಗುತ್ತದೆ.

ಈ ಥೆರಪಿ ಹೇಗಿರುತ್ತೆ?

ಜಪಾನೀಸ್ ವಾಟರ್ ಥೆರಪಿಯನ್ನು ಅಭ್ಯಾಸ ಮಾಡುವುದರಿಂದ ಕ್ಯಾಲೋರಿ ಕಡಿಮೆ ಮಾಡಿಕೊಂಡು ತೂಕ ಇಳಿಸಿಕೊಳ್ಳಬಹುದು.

ತೂಕ ಇಳಿಸಲು ಸಹಕಾರಿ

ನೀವು ಜ್ಯೂಸ್ ಅಥವಾ ಸೋಡಾದಂತಹ ಸಕ್ಕರೆಯುಕ್ತ ಸಿಹಿ ಪಾನೀಯಗಳನ್ನು ಬಳಸುವ ಬದಲು ನೀರನ್ನು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ನಿಮ್ಮ ದೇಹದ ಕ್ಯಾಲೊರಿ ಸುಲಭವಾಗಿ ಕಡಿಮೆಯಾಗುತ್ತದೆ.

ಜ್ಯೂಸ್ ಬದಲು ನೀರು ಸೇವಿಸಿ