ಆಕಳಿಸುವಾಗ ಕಣ್ಣಲ್ಲಿ ನೀರು ಬರುವುದು ಏಕೆ?

11 February 2025

Pic credit - Pintrest

Preethi Bhat

ಆಕಳಿಸುವಾಗ ಕೆಲವರಿಗೆ  ಕಣ್ಣುಗಳು ಒದ್ದೆಯಾಗುತ್ತದೆ. ಇದು ಒಂದಲ್ಲಾ ಒಂದು ಬಾರಿ ನಮ್ಮ ಅನುಭವಕ್ಕೆ ಬಂದಿರಲೇಬೇಕು. ಆದರೆ ಈ ರೀತಿ ಆಗಲು ಕಾರಣವೇನು?

Pic credit - Pintrest

ಆಕಳಿಕೆ ಒಂದು ರೀತಿಯ ಸಾಂಕ್ರಾಮಿಕ. ಆಕಳಿಸುತ್ತಿರುವ ವ್ಯಕ್ತಿಯನ್ನು ನೋಡಿದಾಗ ನಮಗೂ ಆಕಳಿಕೆ ಬರುತ್ತದೆ. ಆದರೆ ನೀವು ಜೋರಾಗಿ ಆಕಳಿಸುವಾಗ ಕೆಲವೊಮ್ಮೆ ಕಣ್ಣುಗಳಲ್ಲಿ ನೀರು ಬರುತ್ತದೆ.

Pic credit - Pintrest

ಈ ರೀತಿ ಆಕಳಿಸುವಾಗ ಕಣ್ಣೀರು ಬರುವುದಕ್ಕೆ ಕಾರಣವೇನು? ಯಾಕಾಗಿ ಈ ರೀತಿಯ ಅನುಭವವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

Pic credit - Pintrest

ಸಾಮಾನ್ಯವಾಗಿ ನಮ್ಮ ಹುಬ್ಬಿನ ಕೆಳಗಿರುವ ಗ್ರಂಥಿಗಳು ನಮ್ಮ ಕಣ್ಣುಗಳಲ್ಲಿ ನೀರು ಬರುವುದಕ್ಕೆ ಕಾರಣವಾಗುತ್ತವೆ.

Pic credit - Pintrest

ಈ ಗ್ರಂಥಿಗಳು ದಿನವಿಡೀ ನಿಧಾನವಾಗಿ ನೀರನ್ನು ಉತ್ಪಾದಿಸುತ್ತವೆ ಮತ್ತು ಇದರಿಂದಾಗಿ ನಿಮ್ಮ ಕಣ್ಣುಗಳಲ್ಲಿ ನೀರು ಕಾಣಿಸುತ್ತವೆ.

Pic credit - Pintrest

ಆಕಳಿಸುವಾಗ ಮುಖದ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ, ಇದು ಈ ಕಣ್ಣೀರಿನ ಗ್ರಂಥಿಗಳ (ಲ್ಯಾಕ್ರಿಮಲ್ ಗ್ರಂಥಿಗಳು) ಮೇಲೆ ಒತ್ತಡವನ್ನುಂಟು ಮಾಡುತ್ತದೆ.

Pic credit - Pintrest

ಕಣ್ಣೀರು ತುಂಬಿದ ಗ್ರಂಥಿಗಳ ಮೇಲಿನ ಒತ್ತಡ ನೀರನ್ನು ಬಿಡುಗಡೆ ಮಾಡುತ್ತದೆ. ಅದಕ್ಕಾಗಿಯೇ ಆಕಳಿಸುವಾಗ, ಕಣ್ಣುಗಳಲ್ಲಿ ನೀರು ಬರುತ್ತದೆ.

Pic credit - Pintrest

ಬೊಜ್ಜು ಕಡಿಮೆಯಾಗಲು ಈ ಹಣ್ಣಿನ ಬೀಜಗಳನ್ನು ತಿನ್ನಿ